ಸಚಿವರ ಕಾರ್ಯಕ್ರಮದ ಭದ್ರತೆಗೆ ಹೊರಟಿದ್ದ ಡಿಎಆರ್ ವ್ಯಾನ್ ಪಲ್ಟಿಯಾಗಿರುವ ಘಟನೆ ಶಿರಸಿ- ಯಲ್ಲಾಪುರ ಮಾರ್ಗದ ತಾರಗೋಡ ಗ್ರಾಮದ ಬಳಿ ನಡೆದಿದೆ.
ಶಿರಸಿಯಲ್ಲಿ ನಡೆಯಲಿದ್ದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ಅವರ ಕಾರ್ಯಕ್ರಮದ ಭದ್ರತೆಗಾಗಿ ಕಾರವಾರದಿಂದ ಈ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನ ತೆರಳಿತ್ತು. ಇದರಲ್ಲಿ ಎಂಟು ಮಂದಿ ಸಿಬ್ಬಂದಿ ಇದ್ದರು. ಆದರೆ ತಾರಗೋಡ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು, ಮೂವರು ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿರಸಿ ಟಿಎಸ್ಎಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
28/09/2022 08:34 pm