ಭಟ್ಕಳ ಮಣ್ಕುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ಬೈಕ್ ಸವಾರನ ಮೇಲೆ ಜಲ್ಲಿ ಲಾರಿ ಹರಿದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಮುಟ್ಟಳ್ಳಿ ಮರಂಬಳ್ಳಿಯ ಮಂಜುನಾಥ ಗೊಂಡ ಮೃತ ವ್ಯಕ್ತಿ. ಈತ ಕೆಲಸಕ್ಕೆ ಹೋಗಲೆಂದು ಮಣ್ಕುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ಬೈಕ್ ನಲ್ಲಿ ನಿಂತಿದ್ದ ವೇಳೆ ಜಲ್ಲಿ ಲಾರಿವೊಂದು ಮುಂಭಾಗದಲ್ಲಿ ಬರುತ್ತಿದ್ದ ಕಾರನ್ನು ಗುದ್ದಿ, ರಸ್ತೆ ಕ್ರಾಸ್ ಮಾಡಲು ನಿಂತಿದ್ದ ಬೈಕ್ ಸವಾರನ ಮೇಲೆ ಹರಿದು ಹೋಗಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯದಲ್ಲಿ ಈತ ಸಾವನ್ನಪ್ಪಿದ್ದಾನೆ. ಸದ್ಯ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
PublicNext
21/09/2022 04:14 pm