ಕುಂದಾಪುರ: ಶಿವಮೊಗ್ಗದ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 3ನೇ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕುಂದಾಪುರದ ಓಕ್ವುಡ್ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಸೋಹನ್ ಹೆಗ್ಡೆ (5ನೇ ತರಗತಿ) ಕಟಾದಲ್ಲಿ ಕಂಚು, ಅವ್ನಿ ಪೂಜಾರಿ (7ನೇ ತರಗತಿ) ಕಟಾದಲ್ಲಿ ಚಿನ್ನ ಹಾಗೂ ಆದಿತ್ಯ ಕೃಷ್ಣಯ್ಯ ಮೊಗವೀರ (8ನೇ ತರಗತಿ) ಕಟಾದಲ್ಲಿ ಚಿನ್ನ, ಕುಮಿಟೆಯಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಇವರು ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ (ರಿ.) ಇದರ ವಿದ್ಯಾರ್ಥಿಗಳಾಗಿದ್ದು, ಓಕ್ ವುಡ್ ಶಾಲೆಯ ಪ್ರಾಂಶುಪಾಲೆ ನೀತಾ ಎ. ಶೆಟ್ಟಿ ಪ್ರಾಂಶುಪಾಲರು, ನಿರ್ವಾಹಕಿ ಸಹನಾ ಆರ್. ಶೆಟ್ಟಿ, ದೈಹಿಕ ಶಿಕ್ಷಕ ಪ್ರಶಾಂತ ಶೆಟ್ಟಿ ತರಬೇತುದಾರ ರೆನ್ಸಿ ಸಂದೀಪ ವಿ. ಕಿರಣ್ ಶುಭ ಹಾರೈಸಿದರು..
Kshetra Samachara
10/09/2022 03:20 pm