ಉಡುಪಿ: ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಲಕ್ಷ್ಮೀವರ ತೀರ್ಥರ ನಿಧನಾ ನಂತರ ತೆರವಾಗಿದ್ದ ಪೀಠ, ಜುಲೈ 19, 2018ರಿಂದ ಖಾಲಿಯಾಗಿತ್ತು. ಶಿರೂರು ಮಠಕ್ಕೆ ಉತ್ತರಾಧಿಕಾರಿ ಯಾರು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಉತ್ತರಾಧಿಕಾರಿ ಉತ್ತರಾಯಣ ನಂತರ ಆಗಲಿದೆ. ಯೋಗ್ಯ ವಟುವನ್ನು ಆಯ್ಕೆ ಮಾಡಲಾಗಿದೆ. ಆ ವಟುವಿಗೆ ಈಗ ತರಬೇತಿ ನಡೆಯುತ್ತಿದೆ. ಮುಂದಿನ ವರ್ಷದ ಉತ್ತರಾಯಣದಲ್ಲಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ' ಎಂದು ಮಾಹಿತಿ ನೀಡಿದ್ದಾರೆ.
Kshetra Samachara
05/12/2020 11:05 pm