ಬೈಂದೂರು: ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ರಾಜ್ಯದಲ್ಲಿ ನೋಂದಣಿಯಾದ ಶಿಕ್ಷಣ ಸಂಸ್ಥೆಗಳಲ್ಲಿ, ಪಿ.ಯು.ಸಿ, ಐ.ಟಿ. ಐ, ಡಿಪ್ಲೋಮಾ, ಬಿ.ಎ, ಬಿ.ಎಸ್ಸಿ, ಬಿ.ಕಾಂ,ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮಾ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಹಾಗೂ ಎಂ.ಬಿ.ಬಿ.ಎಸ್,ಬಿ.ಇ, ಬಿ.ಟೆಕ್ ಮತ್ತು ಇತರೆ ಸ್ನಾತಕೋತ್ತರ ಕೋರ್ಡ್ಗಳನ್ನು ವ್ಯಾಸಾಂಗ ಮಾಡುತ್ತಿರುವ ನೇಕಾರರ ಮಕ್ಕಳಿಂದ ವಿದ್ಯಾರ್ಥಿವೇತನಕ್ಕೆ ಸೇವಾಸಿಂಧು ತಂತ್ರಾಂಶ ಮೂಲಕ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಇಲಾಖೆಯ ವೆಬ್‌ಸೈಟ್
http://www.karnatakadht.org ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
04/10/2022 02:35 pm