ಕಾರ್ಕಳ: ತುಳುನಾಡ ಜಾನಪದ ಕ್ರೀಡೆಯಾಗಿರುವ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ತೆಳ್ಳಾರು ಮೋಡೆ(6)(ಕೋಣದ ಹೆಸರು) ಅನಾರೋಗ್ಯದಿಂದ ಮೃತಪಟ್ಟಿದೆ.
ಕಳೆದ ಎರಡು ದಿನಗಳಿಂದ ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ,ಚಿಕಿತ್ಸೆಗೆ ಸ್ವಂದಿಸದೇ ಶನಿವಾರ ಮದ್ಯಾಹ್ನ ಸಾವನ್ನಪ್ಪಿದೆ.ಹಗ್ಗ, ಹಿರಿಯ,ಕಿರಿಯ, ನೇಗಿಲು ಹಿರಿಯ, ಕಿರಿಯ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿರುವ ತೆಳ್ಳಾರು ಮೋಡೆ, ಅಡ್ಡ ಹಲಗೆಯಲ್ಲಿ ಪ್ರತಿ ಬಾರಿಯೂ ಸರಣಿ ಪ್ರಶಸ್ತಿ ತನ್ನದಾಗಿರಿಸುವ ಮೂಲಕ ವಿಶಿಷ್ಟ ಸಾಧನೆಗೈದು ಕಂಬಳ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಕಾರ್ಕಳ ತೆಳ್ಳಾರು ಬೋಳಾರ ನೇರೋಳ್ ಪಲ್ಕೆ ಬರ್ಕೆ ಮನೆಯ ಕೋಣ ಇದಾಗಿದ್ದು, ದುರ್ಗ-ತೆಳ್ಳಾರು ಹೆಸರು ಕಂಬಳ ಕ್ಷೇತ್ರದಲ್ಲಿ ಮೋಡೆ ಹೆಸರು ಅಚ್ಚೊತ್ತಿ ನಿಲ್ಲುವಂತೆ ಮಾಡಿದೆ.
ಮೋಡೆ ಸಾವಿನಿಂದ ಕಂಬಳ ಪ್ರಿಯರು ಕಂಬನಿ ಮಿಡಿದಿದ್ದಾರೆ.
Kshetra Samachara
17/09/2022 05:45 pm