ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಶಿಕ್ಷಕರ ಒಂದು ದಿನದ ಕಲಿಕಾ ಚೇತರಿಕೆ ತರಬೇತಿ ಕಾರ್ಯಗಾರ

ಬೈಂದೂರು : ಬೈಂದೂರು ವಲಯದಲ್ಲಿ ರಾಜ್ಯದಲ್ಲಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು/ ಗೌರವ ಶಿಕ್ಷಕರಿಗಾಗಿ ಒಂದು ದಿನದ ಕಲಿಕಾ ಚೇತರಿಕೆ ತರಬೇತಿ ಕಾರ್ಯಾಗಾರವನ್ನು ಸೋಮವಾರ ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಮಂಡಳಿಯ ಸಹಕಾರದೊಂದಿಗೆ SMT ಪ್ರೌಢಶಾಲೆ ಕೊಲ್ಲೂರು ಇಲ್ಲಿ ನಡೆಯಲಾಯಿತು.

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಕೆರಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು

ಬೈಂದೂರು ತಾಲೂಕು ತಹಸೀಲ್ದಾರ್ ಶೋಭಾಲಕ್ಷ್ಮಿ.ಹೆಚ್. ಎಸ್. ಕಾರ್ಯಕ್ರಮಕ್ಕೆ ಶ್ಲಾಘಿಸಿ ಶುಭಹಾರೈಸಿದರು.

ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ.ಎಂ.ಮುಂದಿನಮನಿ,ಪ್ರಭಾರ ಕ್ಷೇತ್ರಸಮನ್ವಯಾಧಿಕಾರಿ ಶ್ರೀ ಕರುಣಾಕರ ಶೆಟ್ಟಿ,ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ನಾಗರಾಜ ಭಟ್ ,ಕಲಿಕಾ ಚೇತರಿಕೆ ನೋಡಲ್ ಬಿ.ಆರ್.ಪಿ ಶ್ರೀ ಸುಧಾಕರ ದೇವಾಡಿಗ,ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶೇಖರ್ ಗಾಣಿಗ,ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಲಯದ ವಿವಿಧ ಶಾಲೆಗಳ 130 ಅತಿಥಿ ಶಿಕ್ಷಕರು / ಗೌರವ ಶಿಕ್ಷಕರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

08/06/2022 08:30 am

Cinque Terre

568

Cinque Terre

0

ಸಂಬಂಧಿತ ಸುದ್ದಿ