ಬೈಂದೂರು: ಶ್ರೀ ರಾಘವೇಂದ್ರ ಕೃಪಾಕಟಾಕ್ಷದಿಂದ ಲಕ್ಷಾಂತರ ಜನರನ್ನು ಮನಗೆದ್ದ ಸಂಜೆಪ್ರಭ ಪತ್ರಿಕೆಯು ಹತ್ತನೇ ವರ್ಷದ ಸಂಭ್ರಮವನ್ನು ಜೂನ್ 4ರ ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಶ್ರೀಶ್ರೀಶ್ರೀ ವಿಶ್ವ ಸಂತೋಷ ಭಾರತೀ ಶ್ರೀ ಪಾದಂಗಳವರ ದಿವ್ಯಸಾನಿಧ್ಯ ಹಾಗೂ ಅತಿಥಿಗಣ್ಯರ ಉಪಸ್ಥಿತಿಯಲ್ಲಿ "ಕುಂದಾಪುರ ಮಿತ್ರ" ಪತ್ರಿಕೆಯ ಸಂಪಾದಕರಾದ ಶೀ ಟಿ.ಪಿ.ಮಂಜುನಾಥ್ ರವರಿಗೆ "ಸಂಜೆ ಪ್ರಭ ಮಾಧ್ಯಮ ಸೇವಾ ರತ್ನ" ಪ್ರಶಸ್ತಿಯನ್ನು ನೀಡಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
Kshetra Samachara
06/06/2022 06:22 pm