ಕುಂದಾಪುರ :ಆಲೂರು ಹಾಗೂ ಸ್ಥಳೀಯ 23 ಭೂ ರಹಿತ ಕೊರಗ ಸಮುದಾಯದ ಕುಟುಂಬದವರಿಗೆ ಡಾ. ಮಹಮ್ಮದ್ ಪೀರ್ ವರದಿ ಅನ್ವಯ ಭೂಮಿ ನೀಡಬೇಕು ಎಂದು ಕರ್ನಾಟಕ ಆದಿವಾದಿ ಹಕ್ಕು ಸಮನ್ವಯ ಸಮಿತಿ ಉಡುಪಿ ಇವರಿಂದ ಕುಂದಾಪುರ ಆಲೂರು ಪಂಚಾಯತ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ ಈ ಹಿಂದೆ 2001 ರಲ್ಲಿ 16,000 ಕೊರಗರು ಇದ್ದರು ಆದರೆ ಇಂದು 9 ಸಾವಿರಕ್ಕೆ ಇಳಿಕೆ ಕಂಡಿದೆ. ಕೊರಗ ಜನಸಂಖ್ಯೆ ಇಳಿಕೆ ಹಿನ್ನೆಲೆ 1994 ರಲ್ಲಿ ಆಗಿನ ಡಿ. ಸಿ ಡಾ. ಮಹಮ್ಮದ್ ಪೀರ್ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯ ಅಭಿವೃದ್ಧಿ ವರದಿಯನ್ನು ಪಡೆದು, ಪ್ರತಿ ಕೊರಗ ಸಮುದಾಯಕ್ಕೆ 2 ಎಕರೆ ಜಮೀನು ನೀಡುವಂತೆ ಶಿಫಾರಸ್ಸು ಮಾಡಿದ್ದರು ಎಂದರು. ಧರಣಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಗಣೇಶ್ ಆಲೂರು, ರೇವತಿ ಆಲೂರು, ಸುರೇಂದ್ರ ನಾರ್ಕಳಿ, ಬಾಬು ನಾಡ, ದಾರು, ನಾರಾಯಣ ಆಲೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/04/2022 07:40 am