ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟ್ ಬೇಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ನಾಗರಾಜ್ ಪುತ್ರನ್ ಆಯ್ಕೆ

ಕುಂದಾಪುರ : ಕಟ್ ಬೇಲ್ತೂರು ಸಭಾಭವನದಲ್ಲಿ ನಡೆದ ಆಂತರಿಕ ಆಯ್ಕೆಯಲ್ಲಿ ಸಾಮಾನ್ಯ ವರ್ಗ ಮೀಸಲಾತಿ ನಿಯಮದ ಪ್ರಕಾರ ಬಿಜೆಪಿ ಬೆಂಬಲಿತ ಅಭ್ಯರ್ಥಿಯವರಾದ ನಾಗರಾಜ ಎಸ್ ಪುತ್ರನ್ ಅಧ್ಯಕ್ಷರಾಗಿ ಮತ್ತು ಬಿಜೆಪಿ ಬೆಂಬಲಿತರಾದ ಸಾಮಾನ್ಯ ವರ್ಗದ ‘ಅ’ ಮಹಿಳಾ ಮೀಸಲಾತಿ ನಿಯಮದ ಪ್ರಕಾರ ಶ್ವೇತಾ ದೇವಾಡಿಗ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ಸಂಧರ್ಭದಲ್ಲಿ ಬೈಂದೂರು ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟೆ , ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಶಾಸಕರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಪ್ರಶಂಶಿಸಿದರು. ಹಾಗೂ ಅಧ್ಯಕ್ಷರಾದ ನಾಗರಾಜ ಎಸ್ ಪುತ್ರನ್ ಮಾತನಾಡಿ ತಮ್ಮ ಆಡಳಿತ ಅವಧಿಯಲ್ಲಿ ಪಂಚಾಯತಿನ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವುದರ ಮೂಲಕ ಸಮಗ್ರ ಗ್ರಾಮಭಿವೃದ್ಧಿಗೆ ಒತ್ತು ನೀಡಿದರು.

Edited By : Nirmala Aralikatti
Kshetra Samachara

Kshetra Samachara

19/02/2021 05:42 pm

Cinque Terre

2.72 K

Cinque Terre

0

ಸಂಬಂಧಿತ ಸುದ್ದಿ