ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಡಿಕೆಶಿ ಅವರ ಮೇಲೆ ರಾಜಕೀಯ ಪ್ರೇರಿತ ಸಿಬಿಐ ದಾಳಿ: ಕಾಂಗ್ರೆಸ್ ಮುಖಂಡರ ಆಕ್ರೋಶ

ಉಡುಪಿ: ರಾಜಕೀಯ ಕಾರಣಗಳಿಗಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೆಲಿಯೋ ಖಂಡಿಸಿದ್ದಾರೆ.

ಬಿಜೆಪಿ ನೇತೃತ್ವದ ಸರಕಾರ ಚುನಾವಣೆಯ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರ ಮನೋಸ್ಥೈರ್ಯವನ್ನು ಕುಗ್ಗಿಸಲೆಂದು ಆಡಳಿತ ಯಂತ್ರವನ್ನು ಉಪಯೋಗಿಸಿಕೊಂಡು ನಿರಂತರವಾಗಿ ದಾಳಿ ಮಾಡಿಕೊಂಡು ಬಂದಿದೆ. ಒಂದೆಡೆ ಬಿಜೆಪಿಗೆ ಸೋಲುವ ಭಯದಿಂದಲೇ ಇಂತಹ ದಾಳಿಗಳನ್ನು ಮಾಡಹೊರಟಿದ್ದು ಖಂಡನೀಯವಾಗಿದೆ. ತಮ್ಮಲ್ಲಿ ಅಧಿಕಾರವನ್ನು ದುರುಪಯೋಗಪಡಿಸುವ ಕೆಲಸ ಮಾಡಹೊರಟಿರುವ ಬಿಜೆಪಿ ಸರಕಾರದ ಇಂತಹ ಬೆದರಿಕೆಗೆ ಕಾಂಗ್ರೆಸ್ ಎಂದೂ ಕೂಡ ಹೆದರುವುದಿಲ್ಲ.

ಹೋರಾಟದಿಂದಲೇ ಮೇಲೆ ಬಂದಿರುವ ಡಿ ಕೆ ಶಿವಕುಮಾರ್ ಅವರೊಂದಿಗೆ ಇಡೀ ಕಾಂಗ್ರೆಸ್ ಕುಟುಂಬವಿದ್ದು ಅವರ ಪರವಾಗಿ ನಿಲ್ಲುತ್ತದೆ ಮತ್ತು ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಬಿಜೆಪಿಗೆ ಉತ್ತರ ನೀಡಲಿದೆ ಎಂದು ವೆರೋನಿಕಾ ಹೇಳಿದ್ದಾರೆ.

Edited By :
Kshetra Samachara

Kshetra Samachara

06/10/2020 07:17 pm

Cinque Terre

7.26 K

Cinque Terre

1

ಸಂಬಂಧಿತ ಸುದ್ದಿ