ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಮುದರಂಗಡಿ ಮೈಂದ ಕೆರೆ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

ಅದಾನಿ ಯುಪಿಸಿಎಲ್ ಕಂಪನಿಯ ಸಿಎಸ್‌ಆರ್ ಯೋಜನೆಯಡಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮುದರಂಗಡಿಯ ಸಾಂತೂರು ಪರಾಡಿ ಮೈಂದಕೆರೆ ಕಳಪೆ ಮಟ್ಟದ್ದಾಗಿದೆ ಎಂದು ಮುದರಂಗಡಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ಶರತ್ ಶೆಟ್ಟಿ ಸಾಂತೂರು ಆರೋಪಿಸಿದ್ದಾರೆ.

ಕೆರೆ ಕಾಮಗಾರಿಯಲ್ಲಿ ಲೋಪಗಳಾಗಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮದ ಮುಂದೆ ವಿವರಿಸಿದ ಅವರು, 2019ರಲ್ಲಿ ಕೆರೆ ಅಭಿವೃದ್ಧಿಪಡಿಸಲು ಯುಪಿಸಿಎಲ್ ಗ್ರಾ.ಪಂ.ಗೆ ಪ್ರಸ್ತಾವನೆ ಸಲ್ಲಿಸಿತ್ತು. ಅಂದು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ವಿರೋಧವನ್ನೂ ಗಣನೆಗೆ ತೆಗೆದುಕೊಳ್ಳದೆ ಅಂದಿನ ಅಧ್ಯಕ್ಷ ನಿರ್ಣಯ ತೆಗೆದುಕೊಂಡು ಗುತ್ತಿಗೆದಾರಿಕೆಯನ್ನು ತಾವೇ ಪಡೆದು ಕಾಮಗಾರಿ ಆರಂಭಿಸಿದ್ದರು.

4 ವರ್ಷ ನಿಧಾನಗತಿಯಲ್ಲಿ ಸಾಗಿದ ಅಪೂರ್ಣ ಕಾಮಗಾರಿಯನ್ನು ಏಪ್ರಿಲ್ ತಿಂಗಳಿನಲ್ಲಿ ಉದ್ಘಾಟಿಸಲು ಕಂಪನಿ ಗ್ರಾ.ಪಂ.ಗೆ ಆಹ್ವಾನ ನೀಡಿತ್ತು. ಆದರೆ ಪರಿಶೀಲನೆ ನಡೆಸದೆ ಕಾಮಗಾರಿ ಉದ್ಘಾಟಿಸಲು ನಾವು ನಿರಾಕರಿಸಿದ್ದೆವು. ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆಗಾಗಿ ಕಂಪನಿಯವರನ್ನು ಎರಡೆರಡು ಬಾರಿ ಆಹ್ವಾನಿಸಿದರೂ, ನಾವು ನಿರಾಕರಿಸಿದ್ದೆವು.

ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಗೆ ಈ ಭಾಗದ ರಸ್ತೆಯೆಲ್ಲ ನೀರು ತುಂಬಿ ಸಮಸ್ಯೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಕಂಪನಿ ಅಧಿಕಾರಿಗಳು ತುರ್ತು ಪರಿಹಾರವನ್ನು ನಡೆಸಿದ್ದರು. ಆದರೆ ಕೆರೆ ಕೆಳ ಭಾಗದಲ್ಲಿ ಪರಿಶೀಲನೆ ನಡೆಸಿದಾಗ ನಿರ್ಮಿಸಿರುವ ತಡೆಗೋಡೆ ಕಲ್ಲುಗಳು ಜಾರಿದ್ದು, ಸುತ್ತಮುತ್ತಲಿನ ಪ್ರದೇಶಗಳೂ ಕುಸಿಯಲಾರಂಭಿಸಿರುವುದನ್ನು ಕಂಪನಿ ಗಮನಕ್ಕೆ ತರಲಾಯಿತು.

ಕಂಪನಿ ಅಧಿಕಾರಿ ಇಂಜಿನಿಯರ್ ಅವರನ್ನು ಕರೆಯಿಸಿ ಸ್ಪಷ್ಟನೆ ಕೇಳಿದರೂ, ಅವರು ಗುತ್ತಿಗೆದಾರರೇ ಅದನ್ನು ನಿರ್ವಹಿಸುವುದಾಗಿ ಹೇಳಿ ಜಾರಿಕೊಂಡಿದ್ದರು. ಕಂಪನಿ ಕಾಮಗಾರಿ ಗುಣಮಟ್ಟವನ್ನು ಕಾಪಾಡುವಲ್ಲಿಯೂ ವಿಫಲವಾಗಿ ಗುತ್ತಿಗೆದಾರರ ಹೊಟ್ಟೆ ತುಂಬಿಸಲು ಪರೋಕ್ಷವಾಗಿ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Edited By :
Kshetra Samachara

Kshetra Samachara

24/05/2022 03:09 pm

Cinque Terre

3.88 K

Cinque Terre

0

ಸಂಬಂಧಿತ ಸುದ್ದಿ