ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಸತ್ ಗ್ರಂಥಾಲಯಕ್ಕೆ ಉಡುಪಿಯ ಮಹಾಭಾರತ ಗ್ರಂಥ

ಉಡುಪಿ: ನೂರು ವರ್ಷಗಳ ನಂತರ ದೇಶದಲ್ಲಿ ಪ್ರಕಟವಾಗಿರುವ ಮಹಾಭಾರತ ಕೃತಿಯ ಪರಿಷ್ಕೃತ ಆವೃತ್ತಿಯ ( ಸಂಸ್ಕೃತ , 24 ಸಂಪುಟಗಳು) ಒಂದು ಪ್ರತಿಯನ್ನು ಭಾರತದ ಶಕ್ತಿ ಕೇಂದ್ರ ಸಂಸತ್ತಿನ ಗ್ರಂಥಾಲಯಕ್ಕಾಗಿ ಸಲ್ಲಿಸಲಾಗಿದೆ.

ಶ್ರೀ ಪಲಿಮಾರು ಮಠದ ತತ್ವ ಸಂಶೋಧನ ಸಂಸತ್ ನ ವತಿಯಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರಕಟಗೊಂಡು ಶ್ರೀ ವಿಶ್ವೇಶತೀರ್ಥ ಶ್ರೀಪಾದರೂ ಸೇರಿದಂತೆ ಅನೇಕ‌ ಮಾಧ್ವ ಮಠಾಧೀಶರ ಉಪಸ್ಥಿತಿಯಲ್ಲಿ ಪಲಿಮಾರು ಪರ್ಯಾಯದ ಅವಧಿಯಲ್ಲಿ ಉಡುಪಿ ಕೃಷ್ಣ ಮಠದಲ್ಲಿ ವೈಭವದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತ್ತು.

ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮಂತ್ರಿ ಪ್ರಹ್ಲಾದ್ ಜೋಷಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗ್ರಂಥದ ಪ್ರತಿ ಹಸ್ತಾಂತರಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಇದನ್ನು ಸಂಯೋಜಿಸಿದ್ದರು.

ಪೇಜಾವರ ಮಠದ ಪರವಾಗಿ ವಿಷ್ಣುಮೂರ್ತಿ ಆಚಾರ್ಯ, ಅನಂತ ಜಿ.ಎ., ಕೃಷ್ಣ ಭಟ್ , ಪೇಜಾವರ ಮಠದ ದೆಹಲಿ ಶಾಖೆಯ ವ್ಯವಸ್ಥಾಪಕ ದೇವಿಪ್ರಸಾದ್ ಭಟ್ ಉಪಸ್ಥಿತರಿದ್ದರು.

ಈ ಸಂದರ್ಭ ಶ್ರೀಗಳು ಸಚಿವರೊಂದಿಗೆ ಅನೇಕ ವಿಷಯಗಳ ಚರ್ಚೆ ನಡೆಸಿದರು.

ಸಚಿವರು ಶ್ರೀಗಳನ್ನು ಬರಮಾಡಿಕೊಂಡು ಭಕ್ತಿ ಗೌರವ ಅರ್ಪಿಸಿದರು. ಶ್ರೀಗಳೂ ಸಚಿವರಿಗೆ ಶಾಲು, ಫಲ, ಶ್ರೀಕೃಷ್ಣ ಪ್ರಸಾದ, ಮಂತ್ರಾಕ್ಷತೆ ನೀಡಿ ಅಭಿನಂದಿಸಿದರು.

Edited By : Nirmala Aralikatti
Kshetra Samachara

Kshetra Samachara

10/11/2020 06:31 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ