ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಕಬ್ಬಿನಾಲೆಯಲ್ಲಿ ಕೂಲಿ ಕಾರ್ಮಿಕನ ಮೇಲೆ ಎರಗಿದ ಕರಡಿ!; ಪಾದವನ್ನೇ ಕಚ್ಚಿ ಎಳೆಯಿತು

ಹೆಬ್ರಿ: ಕೂಲಿ ಕಾರ್ಮಿಕನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಆಘಾತಕಾರಿ ಘಟನೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ಮತ್ತಾವು ಎಂಬಲ್ಲಿ ನಡೆದಿದೆ.

ಮತ್ತಾವು ನಿವಾಸಿ ರಾಮಕೃಷ್ಣ ಗೌಡ(39) ಎಂಬವರು ಕರಡಿ ದಾಳಿಗೆ ಒಳಗಾದವರು. ಅವರು ಶುಕ್ರವಾರ ಊಟ ಮಾಡಿ ಕೂಲಿ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಎಕಿ ಕರಡಿ ಅವರ ಮೇಲೆ ದಾಳಿ ನಡೆಸಿ ಕಾಲು ಹಾಗೂ ಪಾದಗಳಿಗೆ ಬಲವಾಗಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ!

ಅಚಾನಕ್ ಕರಡಿ ದಾಳಿಯಿಂದ ಭಯಭೀತರಾದ ರಾಮಕೃಷ್ಣ ಗೌಡ ಜೋರಾಗಿ ಕೂಗಿದಾಗ ಸ್ಥಳೀಯರು ಸ್ಥಳಕ್ಕೆ ಧಾವಿಸಿದರು. ಜನರ ಕಿರುಚಾಟ, ಬೊಬ್ಬೆಗೆ ಕರಡಿಯೂ ತಬ್ಬಿಬ್ಬಾಗಿ ಹೆದರಿ ಕಾಲ್ಕಿತ್ತಿದೆ. ಇದರಿಂದಾಗಿ ರಾಮಕೃಷ್ಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು.

ಕಬ್ಬಿನಾಲೆ ಪರಿಸರದಲ್ಲಿ ಈವರೆಗೂ ಕರಡಿ ದಾಳಿ ನಡೆದ ಘಟನೆ ನಮಗೆ ತಿಳಿದಂತೆ ನಡೆದಿಲ್ಲ ಎಂದು ಕೆಲವು ಹಿರಿಯರು ತಿಳಿಸಿದ್ದಾರೆ.

ಈಗ ನಡೆದ ಕರಡಿಯ ಮಾರಣಾಂತಿಕ ದಾಳಿಯಿಂದಾಗಿ ಸ್ಥಳೀಯರು ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.

ಸುದ್ದಿ ತಿಳಿದ ಹೆಬ್ರಿ ವನ್ಯಜೀವಿ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

16/01/2021 07:49 am

Cinque Terre

8.4 K

Cinque Terre

2