ಉಡುಪಿ: ಉಡುಪಿಯ ಬಸ್ ನಿಲ್ದಾಣದ ಸಮೀಪ ಕವಿ ಮುದ್ದಣ ಮಾರ್ಗದಲ್ಲಿ ಗಾಯಾಳಾಗಿ ರಕ್ತದ ಮಡುವಿಲ್ಲಿ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಇವತ್ತು ನಡೆದಿದೆ.
ಈ ವ್ಯಕ್ತಿಯ ಹೆಸರು ಪೆರುಮಾಳ್. (54) ಪಿಲಿಯಾರ್ ಕೊಯಿಲ್ ಸ್ಟ್ರಿಟ್, ವಿಲಪುರಂ, ಜಯನಕೊಂಡಂ, ತಮಿಳುನಾಡು ವಿಳಾಸ ಇರುವ ಆಧಾರ್ ಕಾರ್ಡ್ ಗಾಯಾಳು ಬಳಿ ಪತ್ತೆಯಾಗಿದೆ. ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸಮಾಜಸೇವಕರು ಸೂಚಿಸಿದ್ದಾರೆ.
Kshetra Samachara
21/08/2021 12:46 pm