ಕುಂದಾಪುರ : ಹರಿದ ರಸ್ತೆಯಲ್ಲಿ ಸಂಚಾರ ಬೆಳೆಸುವುದು ನಿಜಕ್ಕೂ ಸಾಹಸವೇ ಸರಿ.
ಸದ್ಯ ಬೆಳ್ವೆ ಪೇಟೆಯ ಅನತಿ ದೂರದಲ್ಲಿಯ ರಸ್ತೆಗಳನ್ನಾ ನೋಡಿದ್ರೆ ನೀವು ದಂಗಾಗಿ ಹೋಗತ್ತಿರಾ.
ಹೌದು ಇಲ್ಲಿ ರಸ್ತೆಗಳಲ್ಲಿ ಹೊಂಡಗಳಿವೆಯೋ ಅಥವಾ ಹೊಂಡಗಳಲ್ಲಿ ರಸ್ತೆ ಇದಿಯೋ ತಿಳಿಯದಂತ್ತಾಗಿದೆ. ಇಂತಹ ಮಾರ್ಗದಲ್ಲಿ ಸಂಚರಿಸುವವರ ಪಾಡು ದೇವರಿಗೆ ಪ್ರೀಯ ಎನ್ನುವಂತಿದೆ.
ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿ – 90ರ ಬೆಳ್ವೆ ಪೇಟೆ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೊಲ್ಲುರು – ಶೃಂಗೇರಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದ್ದರೂ ಇವರೆಗೆ ದುರಸ್ತಿ ಭಾಗ್ಯ ಕಂಡಿಲ್ಲ.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಡೆ ಗಮನಹರಿಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
29/09/2020 12:00 pm