ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಗಾಂಧೀಜಿಯ ರಾಮನಿಗೂ ಗೋಡ್ಸೆಯ ರಾಮನಿಗೂ ವ್ಯತ್ಯಾಸವಿದೆ: ಸಾಮರಸ್ಯ ನಡಿಗೆಯಲ್ಲಿ ರಂಗಕರ್ಮಿ ಸಂತೋಷ್ ನಾಯಕ್ ಪಟ್ಲ

ಕುಂದಾಪುರ: ಗಾಂಧೀಜಿ ಕಂಡ ರಾಮನಿಗೂ ಗೋಡ್ಸೆ ಕಂಡ ರಾಮನಿಗೂ ವ್ಯತ್ಯಾಸವಿದೆ. ಪೈಂಗಂಬರರ ಮುಸ್ಲಿಂ ಧರ್ಮಕ್ಕೂ ಲಾಡೆನ್ ಪ್ರತಿಪಾದಿಸುವ ಧರ್ಮಕ್ಕೂ ಹೇಗೆ ವ್ಯತ್ಯಾವಿದೆ. ಮನುಷ್ಯತ್ವ ಮೀರಿದ ಧರ್ಮ ಇನ್ನೊಂದಿಲ್ಲ ಎಂದು ರಂಗಕರ್ಮಿ ಸಂತೋಷ್ ನಾಯಕ್‌ ಪಟ್ಲ ಹೇಳಿದರು.

ಸಬ್ ಕೊ ಸನ್ಮತಿ ದೇ ಭಗವಾನ್ ಎಂದು ಜಗತ್ತಿಗೆ ಸಾರಿದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಕುಂದಾಪುರದ ಸಮಾನ ಮನಸ್ಕರ ಸಾಮರಸ್ಯ ನಡಿಗೆ ಮತ್ತು ಮೊಂಬತ್ತಿ ಬೆಳಕಿನಲ್ಲಿ ಸಭೆಯಲ್ಲಿ ಮಾತನಾಡಿದರು.

ಸಭೆಗೂ ಮುನ್ನ ಗಾಂಧಿ ಗೀತೆಗಳ ಗಾಯನ ನಡೆದು, ಮೊಂಬತ್ತಿ ಮೆರವಣಿಗೆಯ ಸಾಮರಸ್ಯ ನಡಿಗೆಯ ಮೂಲಕ ಶಾಸ್ತ್ರಿ ವೃತ್ತದಿಂದ ಹೊರಟು ಪಾರಿಜಾತ ಸರ್ಕಲ್‌ನಿಂದ ತಿರುಗಿ ಪುನಃ ಶಾಸ್ತ್ರಿ ಸರ್ಕಲ್‌ ಬಳಿ ಸಮಾರೋಪಗೊಂಡಿತು.

ಖ್ಯಾತ ವಾಗ್ಮಿ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ, ಹಿರಿಯ ಚಿಂತಕ ಮತ್ತು ಕವಿ ವಸಂತ ಬನ್ನಾಡಿ, ಶಶಿಧರ ಹೆಮ್ಮಾಡಿ ಸೇರಿದಂತೆ‌ ಹಲವಾರು ಸಮಾನಮನಸ್ಕರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

03/10/2022 03:30 pm

Cinque Terre

1.92 K

Cinque Terre

2

ಸಂಬಂಧಿತ ಸುದ್ದಿ