ಕುಂದಾಪುರ: ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 112ನೇ ಸಾಮಾನ್ಯ ಸಭೆಯಲ್ಲಿ ಸಂಘದ ಮಾಜಿ ನಿರ್ದೇಶಕರು ಮತ್ತು ಮಾಜಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್.ಮಾಧವ ಕಿಣಿ, ಎಸ್.ವೆಂಕಟರಮಣ ಆಚಾರ್ಯ, ಬಿ.ರಾಘವೇಂದ್ರ ಪೈ, ಜಿ.ವೆಂಕಟೇಶ ಶೆಣೈ, ನಾಗಪ್ರಸಾದ್ ಪೈ ಎಂ.ಜಿ., ಕೆ.ಗೋಪಾಲಕೃಷ್ಣ ನಾಯಕ್, ಮಹಾಬಲ ಪೂಜಾರಿ, ಜಿ.ವೆಂಕಟೇಶ ನಾಯಕ್, ಯು.ವಿಷ್ಣು ಪಡಿಯಾರ್ ಉಪಸ್ಥಿತರಿದ್ದರು.
ನಿರ್ದೇಶಕ ಜಿ.ವೇದವ್ಯಾಸ ಕೆ.ಆಚಾರ್ಯ ಸ್ವಾಗತಿಸಿದರು. ನಿರ್ದೇಶಕರಾದ ಮಾಲಾ ಕೆ.ನಾಯಕ್ ಆಡಳಿತ ವರದಿ ಮತ್ತು ಗೀತಾ ಜಿ.ನಾಯಕ್ ಹಿಂದಿನ ಸಾಮಾನ್ಯ ಸಭೆ ನಡಾವಳಿಯನ್ನು ಮಂಡಿಸಿದರು. ನಿರ್ದೇಶಕ ಕೆ.ಪರಮೇಶ್ವರ ನಾಯಕ್ ಸನ್ಮಾನಿತರ ಪರಿಚಯ ಮಾಡಿದರು. ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಕಿರಣ್ ಫಿಲಿಪ್ ಪಿಂಟೋ ವಂದಿಸಿದರು.
Kshetra Samachara
12/09/2022 09:52 pm