ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹಣದ ಹಿಂದೆ ಹೋಗದಿರಿ, ಜನರ ಹಿಂದೆ ಹೋಗಿ: ನಿವೃತ್ತ ಪೊಲೀಸ್ ಅಧಿಕಾರಿ ಜಯಣ್ಣ

ಪೊಲೀಸ್ ಕೆಲಸ ಎಂಬುದು ದೇವರ ಕೆಲಸ. ನಾವು ಯಾವತ್ತೂ ಹಣದ ಹಿಂದೆ ಹೋಗದೆ ಜನರ ಹಿಂದೆ ಹೋದಲ್ಲಿ ಹಣ ಹಾಗೂ ಜನಬಲ ನಮ್ಮ ಹಿಂದೇನೆ ಬರುತ್ತೆ ಎಂದು ಪಡುಬಿದ್ರಿ ಠಾಣೆಯಲ್ಲಿ ಕ್ರೈಂ ಎಸ್ ಐ ಆಗಿದ್ದು ಇದೀಗ ನಿವೃತ್ತಿ ಹೊಂದಿರುವ ಜಯಣ್ಣ ಹೇಳಿದ್ರು.

ಪಡುಬಿದ್ರಿ ಸಾಯಿ ಆರ್ಕೇಡ್ ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಣದ ಹಿಂದೆ ಹೋದಲ್ಲಿ ನಮಗೆ ಅನ್ನ ನೀಡುತ್ತಿರುವ ಪೊಲೀಸ್ ಇಲಾಖೆಗೂ ಕೆಟ್ಟ ಹೆಸರು ಬರುತ್ತೆ ಎಂದರು. ಇನ್ನು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ನಿವೃತ್ತರ ನಿವೃತ್ತಿ ಜೀವನ ಶುಭಕರವಾಗಿರಲೆಂದು ಹಾರೈಸಿದರು. ಇದೇ ಸಂದರ್ಭ ನೂತನವಾಗಿ ಪಡುಬಿದ್ರಿ ಠಾಣೆಗೆ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪುರುಷೋತ್ತಮರವರನ್ನು ಸನ್ಮಾನಿಸಿಲಾಯಿತು.

Edited By :
Kshetra Samachara

Kshetra Samachara

31/05/2022 06:02 pm

Cinque Terre

2.56 K

Cinque Terre

0

ಸಂಬಂಧಿತ ಸುದ್ದಿ