ಆಟವಾಡಲು ಹೋದ ಬಾಲಕನೊಬ್ಬ ಕೆರೆಯಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಡೆಕಾರಿನ ಭಜನಾ ಮಂದಿರದ ಬಳಿ ನಡೆದಿದೆ.
ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬುವರ ಪುತ್ರ ರಾಘವ (8) ಮೃತಪಟ್ಟ ಬಾಲಕ. ಈತ ಕಿದಿಯೂರು ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ. ಈ ಬಾಲಕ ಸಂಜೆ ಮನೆ ಬಳಿ ಆಟವಾಡಲು ಜಾರು ಬಂಡಿಗೆ ಹೋಗಿದ್ದ. ಬಳಿಕ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಶನಿವಾರ ರಾತ್ರಿ 12 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಬೆಳಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿ ಮೇಲೆತ್ತಿದ್ದಾರೆ.
Kshetra Samachara
23/05/2022 11:50 am