ಕೊಳಲಗಿರಿ: ಉಡುಪಿ ಧರ್ಮ ಪ್ರಾಂತ್ಯದ ವತಿಯಿಂದ ವಸತಿಹೀನರಿಗೆ ವಸತಿ ಕಲ್ಪಿಸುವ ಯೋಜನೆಯಡಿ ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯ ನರ್ನಾಡು ವಾರ್ಡಿನ ಬೆನ್ನ ಡಿಸೋಜ ದಿ.ಫೆಲಿಕ್ಸ್ ಡಿಸೋಜ ಅವರ ಕುಟುಂಬಕ್ಕೆ ಸೂರು ಕಲ್ಪಿಸುವ ಉದ್ದೇಶದಿಂದ ಇಂದು ನೂತನ ಮನೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಚರ್ಚ್ ಧರ್ಮಗುರು ವಂ. ಅನಿಲ್ ಪ್ರಕಾಶ್ ಕ್ಯಾಸ್ತಲಿನೋ ಆಶೀರ್ವಚನಗೈದರು.
ಈ ಮನೆ ಸುಮಾರು 700 ಚ.ಮೀ. ವಿಸ್ತೀರ್ಣದಲ್ಲಿ ಸುಮಾರು ರೂ. 7 ಲಕ್ಷದಲ್ಲಿ 4 ತಿಂಗಳಲ್ಲಿ ಎಸ್.ವಿ.ಪಿ., ಆರ್ಥಿಕ ಸಮಿತಿ, ದಾನಿಗಳ ಸಹಾಯದಿಂದ ಹಾಗೂ ನರ್ನಾಡು ವಾರ್ಡಿನ ಹಬ್ಬವನ್ನು ಆಚರಿಸದೇ ಉಳಿಸಿಕೊಂಡಿದ್ದ ಮೊತ್ತವನ್ನು ಧರ್ಮ ಪ್ರಾಂತ್ಯದ ಯೋಜನೆಯಡಿ ಬರುವ ಮೊತ್ತಕ್ಕೆ ಕ್ರೋಡೀಕರಿಸಿಕೊಂಡು ಮನೆ ನಿರ್ಮಿಸಿ ಕೊಡಲಾಗುತ್ತದೆ.
ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ಅಂತೋನಿ ಮಸ್ಕರೇನ್ಹಸ್, ಎಸ್.ವಿ.ಪಿ. ಅಧ್ಯಕ್ಷರು ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು, ನರ್ನಾಡು ವಾರ್ಡಿನ ಗುರಿಕಾರರಾದ ಕ್ವೀನಿ ಮೇರಿ ಡಿಸೋಜ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Kshetra Samachara
05/10/2020 11:52 pm