ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ ತೆರವಿಗೆ ಮೀನುಗಾರರ ಒತ್ತಾಯ

ಗಂಗೊಳ್ಳಿ: ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧವಿದ್ದರೂ ಮರವಂತೆ ಸಮೀಪ 100 ಮೀಟರ್ ದೂರದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ನಾಡದೋಣಿ, ಕೈರಂಪಣಿ ಹಾಗೂ ಪಾತಿ ದೋಣಿಗಳ ಮೀನುಗಾರರು ಕರಾವಳಿ ಕಾವಲು ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ ಕರಾವಳಿ ಕಾವಲು ಪೊಲೀಸರು ಮರವಂತೆ ಸಮೀಪ ಕಡಲಿನಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಬೋಟುಗಳನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಿದ್ದಾರೆ.

ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಂಜಪ್ಪ ನಿರ್ದೇಶನದಂತೆ ಎಎಸ್‌ಐ ಭಾಸ್ಕರ್, ಸಿಬ್ಬಂದಿ ಉದಯ ಗೌಡ, ರಾಘವೇಂದ್ರ, ಯುವರಾಜ್, ಗಣೇಶ, ಕೆಎನ್‌ಡಿ ಸಿಬ್ಬಂದಿ ಸುರೇಶ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೀನುಗಾರಿಕೆ ಪ್ರಾರಂಭದ ಮೂರು ತಿಂಗಳು ಸಮುದ್ರ ತಳಮಟ್ಟದ ನೀರು ತಂಪಾಗಿರುವುದರಿಂದ ಮೀನುಗಳ ಓಡಾಟ ಮೇಲ್ಭಾಗದಲ್ಲಿರುತ್ತದೆ. ಈ ಸಮಯ ಸಣ್ಣ ಟ್ರಾಲ್ ಬೋಟ್‌ನವರಿಗೆ (140 ಎಚ್‌ಪಿ) ಬೇರೆ ಯಾವುದೇ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ 12 ನಾಟಿಕಲ್ ಮೈಲಿನೊಳಗೆ ಮೀನುಗಾರಿಕೆ ನಡೆಸುತ್ತಿದ್ದರು. ಈಗ ಬುಲ್‌ಟ್ರಾಲ್ ನಿಷೇಧ ಮಾಡಿರುವುದು ಸ್ಥಳೀಯ ಮೀನುಗಾರರನ್ನು ಕಂಗಾಲಾಗಿಸಿದೆ.

Edited By : Vijay Kumar
Kshetra Samachara

Kshetra Samachara

12/10/2020 04:28 pm

Cinque Terre

5.01 K

Cinque Terre

0

ಸಂಬಂಧಿತ ಸುದ್ದಿ