ಹೆಬ್ರಿ: ಉಡುಪಿ ಜಿಲ್ಲೆಯಲ್ಲಿ ಕನ್ನಡ ಅಭಿಮಾನಿಯೊಬ್ಬರು ತಮ್ಮ ಹೆಣ್ಣು ಮಗುವಿಗೆ ಕನ್ನಡ ಅಂತ ನಾಮಕರಣ ಮಾಡಿದ್ದು ಸುದ್ದಿಯಾಗಿತ್ತು. ಈಗ ಜಿಲ್ಲೆಯ ಸೈನಿಕರೊಬ್ಬರು ತಮ್ಮ ಹೆಣ್ಣು ಮಗುವಿಗೆ ಸೈನ್ಯ ಅಂತ ಹೆಸರಿಡುವ ಮೂಲಕ ತಮ್ಮ ವೃತ್ತಿಗೆ ಗೌರವ ಸೂಚಿಸಿದ್ದಾರೆ.
ಜಿಲ್ಲೆಯ ಹೆಬ್ರಿ ತಾಲೂಕಿನ ಆಶಾ- ಪ್ರಶಾಂತ್ ಪೂಜಾರಿ ದಂಪತಿ ತಮ್ಮ ಮಗುವಿಗೆ ಸೈನ್ಯ ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಅವರು ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ಹಾಗೂ ಸೈನ್ಯದ ಮೇಲಿನ ವಿಶೇಷ ಅಭಿಮಾನ ಇರುವ ಪ್ರಶಾಂತ್ ಮಗುವಿಗೆ ಸೈನ್ಯ ಎಂದು ನಾಮಕರಣ ಮಾಡುವ ಮೂಲಕ ವೃತ್ತಿಗೆ ಗೌರವ ತೋರಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Kshetra Samachara
10/10/2020 12:22 pm