ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ್ತೂರ್ಬಾ ಆಸ್ಪತ್ರೆ ಯಲ್ಲಿ 'ಅಪರೂಪದ ರಕ್ತದಾನಿಗಳ ನೋಂದಣಿ, ದಾಖಲೀಕರಣ'

ಮಣಿಪಾಲ: ಡಾ.ಜೈ ಗೋಪಾಲ್ ಜಾಲಿಯವರು ರಕ್ತ ಪೂರಣ ವಿಜ್ಞಾನಕ್ಕೆ ನೀಡಿದ ಅಪಾರ ಕೊಡುಗೆ ಗುರುತಿಸಿ, ಸ್ಮರಿಸಿಕೊಳ್ಳಲು ಅವರ ಜನ್ಮ ದಿನವಾದ ಅಕ್ಟೋಬರ್ 1ನ್ನು ದೇಶಾದ್ಯಂತ “ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವಾಗಿ” ಆಚರಿಸಲಾಗುತ್ತದೆ. ಈ ಸಂದರ್ಭ, "ಕಸ್ತೂರ್ಬಾ ಆಸ್ಪತ್ರೆ- ಅಪರೂಪದ ರಕ್ತದಾನಿಗಳ ನೋಂದಣಿ” ಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ‌ಉಪಕುಲಪತಿ ಲೆ. ಜ. (ಡಾ) ಎಂ.ಡಿ.ವೆಂಕಟೇಶ್ ಅವರು, “ಅಪರೂಪದ ರಕ್ತದ ಗುಂಪು ಹೊಂದಿರುವ ರೋಗಿಗಳಿಗೆ ಜೀವ ಉಳಿಸುವಲ್ಲಿ ಈ ನೋಂದಣಿ ತುಂಬಾ ಸಹಾಯಕವಾಗಲಿದೆ. ಅಪರೂಪದ ರಕ್ತದ ದಾನಿಗಳನ್ನು ಗುರುತಿಸಿ, ರಕ್ತ ಪೂರೈಕೆ ಮಾಡಲು ಭಾರಿ ಪ್ರಯತ್ನ ಮಾಡಬೇಕಾಗುತ್ತದೆ. ಈ ಅಪರೂಪದ ರಕ್ತದಾನಿಗಳ ನೋಂದಣಿ ದಾಖಲೀಕರಣ ಕಾರ್ಯಕ್ರಮ ದಕ್ಷಿಣ ಭಾರತದಲ್ಲೇ ಮೊದಲನೆಯದು” ಎಂದರು. ಸ್ವಯಂಪ್ರೇರಿತ ರಕ್ತದಾನಿಗಳು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನೂ ಅವರು ಸ್ಮರಿಸಿದರು.

Edited By : Vijay Kumar
Kshetra Samachara

Kshetra Samachara

01/10/2020 10:55 pm

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ