ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: "ಜಲ ಸಂಪತ್ತು ಉಳಿಸಲು ಪೂರಕ ಕ್ರಮ": ಡಾ. ಭರತ್ ಶೆಟ್ಟಿ

ಸುರತ್ಕಲ್ : ಮಂಗಳೂರು ನಗರ ಉತ್ತರ ಕ್ಷೇತ್ರದ ಕೃಷ್ಣಾಪುರದಲ್ಲಿರುವ ಶ್ರೀ ವಿಶ್ವನಾಥ ದೇವಸ್ಥಾನದ ಸಮೀಪ ಸಣ್ಣ ನೀರಾವರಿ ಇಲಾಖೆಯಿಂದ 1.50 ಕೋಟಿ ರೂ.ಅನುದಾನದಲ್ಲಿ ಶಾಸಕರಾದ ಡಾ.ಭರತ್‌ ಶೆಟ್ಟಿ ವೈ. ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಪ್ರತೀ ಕಡೆಗಳಲ್ಲಿಯೂ ಕರೆ,ಬಾವಿ ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗುತ್ತದೆ.

ಹೀಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲ ಸಂಪತ್ತು ಉಳಿಸಲು ಪೂರಕ ಕ್ರಮಕ್ಕೆ ಮುಂದಾಗಿದೆ. ಸ್ಥಳೀಯ ಧಾರ್ಮಿಕ ಕಾರ್ಯಕ್ರಮ ಸಂದರ್ಭ ದೇವರ ಜಳಕ, ಗಣೇಶೋತ್ಸವ ಮತ್ತಿತರ ಶುಭ ಸಮಾರಂಭಗಳಿಗೂ ಸದ್ಬಳಕೆಯಾಗಲಿ ಎಂದು ಶಾಸಕರು ಹಾರೈಸಿದರು.

ಪ್ರಶಾಂತ್ ಮೂಡಾಯಿಕೋಡಿ, ಬಿಜೆಪಿ ಉತ್ತರಮಂಡಲ ಅಧ್ಯಕ್ಷತಿಲಕ್ ರಾಜ್ ಕೃಷ್ಣಾಪುರ, ಊರಿನ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/04/2022 09:14 pm

Cinque Terre

2.71 K

Cinque Terre

0

ಸಂಬಂಧಿತ ಸುದ್ದಿ