ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆಸ್ಕರ್ ಹುಲಿಕುಣಿತದ ವಿಡಿಯೋ ವೈರಲ್ !

ಉಡುಪಿ: ಹಿರಿಯ ರಾಜಕಾರಣಿ ,ರಾಜ್ಯಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಇವತ್ತು ನಿಧನರಾಗಿದ್ದಾರೆ.ರಾಜಕೀಯದ ಆಚೆಗೂ ಆಸ್ಕರ್ ಫೆರ್ನಾಂಡಿಸ್ ಅನೇಕ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು.ಯಕ್ಷಗಾನದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಆಸ್ಕರ್ ಫರ್ನಾಂಡಿಸ್ ದೆಹಲಿಗೆ ಮಕ್ಕಳ ಹೂವಿನಕೋಲು ಮೇಳವನ್ನು ಕರೆಸಿ ಪ್ರದರ್ಶನ ಏರ್ಪಡಿಸಿದ್ದನ್ನು ಕರಾವಳಿಯವರು ನೆನಪಿಸುತ್ತಾರೆ.ಕರಾವಳಿಯ ಶಾಸಕರಿಂದ ಸದನದಲ್ಲಿ ನಡೆದಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣ ಹಚ್ಚಿ ಆಸ್ಕರ್ ಕುಣಿದಿದ್ದರು.ಇನ್ನು ಆಸ್ಕರ್ ಅವರು ಹಿಂದೊಮ್ಮೆ ಕರಾವಳಿಯ ಹುಲಿವೇಷಧಾರಿಗಳ ಜೊತೆ ಹೆಜ್ಹೆ ಹಾಕಿದ್ದರು.ಹುಲಿವೇಷಧಾರಿಗಳ ನಡುವೆ ಒಬ್ಬರೇ ಯುವಕರಂತೆ ಕುಣಿಯುವ ಅಪರೂಪದ ಈ ದೃಶ್ಯ ಇವತ್ತು ಎಲ್ಲೆಡೆ ವೈರಲ್ ಆಗುತ್ತದೆ.

Edited By : Manjunath H D
Kshetra Samachara

Kshetra Samachara

13/09/2021 04:24 pm

Cinque Terre

11.61 K

Cinque Terre

1