ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆಯಲ್ಲಿ ಮಲಗಿದ್ದ ಮಹಿಳೆಯ ಮೇಲೆ ಕಾಮುಕ ರಿಕ್ಷಾ ಚಾಲಕನಿಂದ ಹೇಯ ಕೃತ್ಯ- ವೀಡಿಯೋ ವೈರಲ್

ಮಂಗಳೂರು: ರಸ್ತೆಯಲ್ಲಿ ಮಲಗಿದ್ದ ಮಲಗಿದ್ದ ಮಹಿಳೆಯೊಬ್ಬರ ಮೇಲೆ ಕಾಮುಕ ರಿಕ್ಷಾ ಚಾಲಕನೊಬ್ಬ ಹೇಯ ಕೃತ್ಯ ಎಸಗಿರುವ ಘಟನೆ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಕಾಮುಕನ ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ‌.

ರಾತ್ರಿವೇಳೆ ಈ ಘಟನೆ ನಡೆದಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಹೊರಜಿಲ್ಲೆಯ, ಹೊರರಾಜ್ಯದ ಕೂಲಿ ಕಾರ್ಮಿಕರು ಮಲಗುತ್ತಾರೆ. ಬಸ್ ನಿಲ್ದಾಣದಲ್ಲಿ ಬಸ್ ಹೊರಬರುವ ಪ್ರದೇಶದಲ್ಲಿ ರಿಕ್ಷಾ ನಿಲ್ಲಿಸಿದ ಮಧ್ಯವಯಸ್ಕ ಚಾಲಕ ಮಹಿಳೆಯ ಬಳಿ ಮಲಗಿ ಮೊಬೈಲ್ ಟಾರ್ಚ್ ಹಾಕಿ ಆಕೆಯ ಸೀರೆಯನ್ನು ಸರಿಸಿ ವಿಕೃತ ಆನಂದ ಪಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಬಳಿಕ ರಿಕ್ಷಾ ಚಾಲಕ ಅಲ್ಲಿಂದ ತೆರಳಿದ್ದಾನೆ. ಯಾರೋ ಅಲ್ಲಿದ್ದವರು ಯಾರೋ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ.

ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಪೊಲೀಸ್ ಇಲಾಖೆ ಕಾಮುಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : Ashok M
PublicNext

PublicNext

10/12/2024 01:12 pm

Cinque Terre

44.01 K

Cinque Terre

4

ಸಂಬಂಧಿತ ಸುದ್ದಿ