ಮುಲ್ಕಿ: ಹಿಂದೂ ಯುವ ಸೇನೆ ಮತ್ತು ಮಹಿಳಾ ಮಂಡಳಿ ಮುಲ್ಕಿ ಘಟಕದ ಆಶ್ರಯದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಸಾರ್ವಜನಿಕ ಮಡಕೆ ಒಡೆಯುವ ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು.
ಮಹಿಳೆ ಹಾಗೂ ಪುರುಷರ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಕ್ರಮವಾಗಿ ಸುರೇಖಾ ಹಾಗೂ ಶಿವ ಕೊಳಚಿಕಂಬಳ ಬಹುಮಾನ ಪಡೆದರು
ಮುಲ್ಕಿ ವಲಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಆಟೋರಿಕ್ಷ ಚಾಲಕ ಮಾಲಕರ ಸಂಘ ಎ (ಪ್ರ),ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಿ.(ದ್ವಿ), ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೆಎಸ್ ರಾವ್ ನಗರ ನಾರಾಯಣ ಗುರು ಮಹಿಳಾ ಮಂಡಳಿ(ಪ್ರ), ಕೊಲ್ನಾಡು ಮಹಿಳಾ ಮಂಡಳಿ ಕೊಲ್ನಾಡ್(ದ್ವಿ) ತಂಡಗಳು ಬಹುಮಾನ ಹಾಗೂ ಟ್ರೋಪಿಯನ್ನು ಪಡೆಯಿತು.
ಈ ಸಂದರ್ಭ ಉದ್ಯಮಿ ಕಮಲಾಕ್ಷ ಬಡಗಿತ್ಲು, ಮುಲ್ಕಿ ಹಿಂದೂ ಯುವ ಸೇನೆ ಅಧ್ಯಕ್ಷ ಸುನಿಲ್ ಕುಮಾರ್ ಕಿಲ್ಪಾಡಿ, ಉಪಾಧ್ಯಕ್ಷ ಶಂಕರ್ ಪಡಂಗ ಮಹಿಳಾ ಮಂಡಲದ ಅಧ್ಯಕ್ಷೆ ನೀರಜಾ ಅಗರ್ವಾಲ್, ಉಪಾಧ್ಯಕ್ಷೆ ಲತಾ ಶೇಖರ್, ಕೋಶಾಧಿಕಾರಿ ರಂಗ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/10/2022 09:28 am