ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಕಬಡ್ಡಿ ಪಂದ್ಯಾಟ; ಕಲಾ ವಾರಿಯರ್ಸ್,ಎನ್‌ಎಂಸಿ ಸುಳ್ಯಗಳಿಗೆ ಪ್ರಶಸ್ತಿ

ಕಟೀಲು : ಇಲ್ಲಿನ ಪದವೀಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀನಿಧಿ ಆಸ್ರಣ್ಣ ಟ್ರೋಫಿಗಾಗಿ ನಡೆದ ಹೊಲು ಬೆಳಕಿನ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಕಟೀಲು ಕಲಾ ವಾರಿಯರ್ಸ್ ತಂಡ ಪ್ರಥಮ ಸ್ಥಾನಿಯಾಗಿ ೫೦ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು. 

ಎನ್‌ಎಂಸಿ ಸುಳ್ಯ ತಂಡ ದ್ವಿತೀಯ, ಕಲ್ಲಡ್ಕ ವಿಘ್ನೇಶ್ವರ ತೃತೀಯ ಹಾಗೂ ಆಳ್ವಾಸ್ ಎ ಕಾಲೇಜು ತಂಡ ಚತುರ್ಥ ಪ್ರಶಸ್ತಿಗಳನ್ನು ಪಡೆದವು.

ಬೆಲ್ಟ್ ಏರಿಯಾ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟದಲ್ಲಿ ಭ್ರಾಮರಿ ಕಟೀಲು ಪ್ರಥಮ ಸ್ಥಾನಿಯಾದರೆ ಜೈಶಕ್ತಿ ಅಡ್ಕ ಬಾರೆ ದ್ವಿತೀಯ, ಶ್ರೀದೇವಿ ಕೆಂಜಾರ್ ತೃತೀಯ ಹಾಗೂ ಬಜ್ಪೆ ರುದ್ರಾಸ್ ತಂಡ ಚತುರ್ಥ ಪ್ರಶಸ್ತಿಯನ್ನು ಪಡೆದವು.

ಸಮಾರಂಭದಲ್ಲಿ ಶ್ರೀಹರಿನಾರಾಯಣದಾಸ ಆಸ್ರಣ್ಣ, ಈಶ್ವರ ಕಟೀಲ್, ದಯಾನಂದ ಮಾಡ,  ಲೋಕಯ್ಯ ಸಾಲ್ಯಾನ್,  ಅಭಿಲಾಷ್ ಶೆಟ್ಟಿ, ಕೇಶವ ಕಟೀಲ್ , ಭರತ್ ರಾವ್, ಗುರುರಾಜ್ ಮಲ್ಲಿಗೆಯಂಗಡಿ, ಗಣೇಶ್ ಶೆಟ್ಟಿ, ಸುಂದರ ಪೂಜಾರಿ, ವಿಕ್ರಂ ಮಾಡ ಮತ್ತಿತರರಿದ್ದರು. 

Edited By : PublicNext Desk
Kshetra Samachara

Kshetra Samachara

10/05/2022 09:29 am

Cinque Terre

1.69 K

Cinque Terre

0

ಸಂಬಂಧಿತ ಸುದ್ದಿ