ಮುಲ್ಕಿ: ಬಂಟರ ಸಂಘ ಮುಲ್ಕಿ (ರಿ) ಆಶ್ರಯದಲ್ಲಿ ಯುವ ಮತ್ತು ಮಹಿಳಾ ವಿಭಾಗದ ಸಹಭಾಗಿತ್ವದಲ್ಲಿ ನಡೆದ ಕೀರ್ತಿಶೇಷ ಅಮರನಾಥ ಶೆಟ್ಟಿ ಟ್ರೋಪಿ"ಬಂಟ್ಸ್ ಪ್ರೀಮಿಯರ್ ಲೀಗ್ 2022" ಸಮಾರೋಪ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ಬಂಟ್ಸ್ ಪ್ರೀಮಿಯರ್ ಲೀಗ್-2022ರ ಅಂತಿಮ ಪಂದ್ಯಾಟದ ರೋಮಾಂಚಕಾರಿ ಹಣಾಹಣಿಯಲ್ಲಿ ಸುರಗಿರಿ ಸ್ಟ್ರೈಕರ್ಸ್ ತಂಡವು ಶಿಮಂತೂರು ಆದಿ ಜನಾರ್ಧನ ತಂಡವನ್ನು ಸೋಲಿಸಿ ಕೀರ್ತಿಶೇಷ ಅಮರನಾಥ ಶೆಟ್ಟಿ ಟ್ರೋಪಿ ಪಡೆಯಿತು.
ದ್ವಿತೀಯ ಬಹುಮಾನ ಶಿಮಂತೂರು ಆದಿ ಜನಾರ್ಧನ ತಂಡದ ಪಾಲಾಯಿತು.
ಅಂತಿಮ ಪಂದ್ಯದ ಪಂದ್ಯಶ್ರೇಷ್ಠ,ಉತ್ತಮಎಸೆತಗಾರರಾಗಿ ಸುರಗಿರಿ ಸ್ಟ್ರೈಕರ್ಸ್ ತಂಡದ ಭರತ್ ಹಾಗೂ ದೇವಿಪ್ರಸಾದ್, ಸರಣಿಶ್ರೇಷ್ಠ ರಾಗಿ ಆದಿ ಜನಾರ್ದನ ಶಿಮಂತೂರು ತಂಡದ ರೂಪೇಶ್ ಶೆಟ್ಟಿ, ಉತ್ತಮ ದಾಂಡಿಗನಾಗಿ ಉಳೆಪಾಡಿ ಯುನೈಟೆಡ್ ತಂಡದ ಭರತ್ ,ಶಿಸ್ತುಬದ್ಧ ತಂಡವಾಗಿ ಪುನರೂರು ಸ್ಟ್ರೈಕರ್ಸ್ ತಂಡವು ಬಹುಮಾನ ಪಡೆದುಕೊಂಡಿತು.
ಸಮಾರೋಪದ ಅಧ್ಯಕ್ಷತೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾತನಾಡಿ ಬಂಟ ಯುವ ಸಮುದಾಯ ಕ್ರೀಡೆಯ ಜೊತೆಗೆ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಮಾದರಿಯಾಗಬೇಕು ಎಂದರು. ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ದೆ, ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ನ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ, ಉದ್ಯಮಿ ಗಿರೀಶ್ ಎಂ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಒಟ್ಟು 12 ತಂಡಗಳು ಟೂರ್ನಮೆಂಟಿನಲ್ಲಿ ಭಾಗವಹಿಸಿದ್ದವು.
ಜೊತೆ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಶ್ರೀಶ ಸರಾಫ್ ಐಕಳ ಕಾರ್ಯಕ್ರಮ ನಿರೂಪಿಸಿದರು.
Kshetra Samachara
17/04/2022 08:48 pm