ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಕರ್ನಾಟಕ ತಂಡಗಳ ಶುಭಾರಂಭ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ದಿನದಾಟದಲ್ಲಿ ಕರ್ನಾಟಕದ ಪುರುಷ ಹಾಗೂ ಮಹಿಳಾ ತಂಡಗಳು ಶುಭಾರಂಭ ಮಾಡಿದೆ.

ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ, ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು 35-18, 35-21 ನೇರ ಸೆಟ್‌ಗಳ ಅಂತರದಲ್ಲಿ ಮಣಿಸಿತು ಹಾಗೂ ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು 35-14, 35-14 ಅಂತರದಲ್ಲಿ ಮಣಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದೆ.

ಮೊದಲ ದಿನದ ಫಲಿತಾಂಶ:

ಪುರುಷರ ವಿಭಾಗ:

ಭಾರತೀಯ ರೈಲ್ವೇ ತಂಡ ಮುಂಬೈ ತಂಡವನ್ನು 23-13, 35-23 ಅಂತರದಲ್ಲಿ, ತಮಿಳುನಾಡು ತಂಡ ಛತ್ತೀಸ್ಗಢ ತಂಡವನ್ನು 35-28, 33-17 ಅಂತರದಲ್ಲಿ, ತೆಲಂಗಾಣ ತಂಡ ಆಂಧ್ರ ಪ್ರದೇಶ ತಂಡವನ್ನು 35-22, 35-22 ಅಂತರದಲ್ಲಿ, ಚಂಡೀಗಢ ತಂಡ ಅಸ್ಸಾಂ ತಂಡವನ್ನು 35-18, 35-30 ಅಂತರದಲ್ಲಿ, ದೆಹಲಿ ತಂಡ ಮಧ್ಯಪ್ರದೇಶ ತಂಡವನ್ನು 35- 25, 35- 22 ಅಂತರದಲ್ಲಿ, ಕೆನರಾ ಬ್ಯಾಂಕ್ ತಂಡ ಜಮ್ಮು ಕಾಶ್ಮೀರ ತಂಡವನ್ನು 35-12, 35-22 ಅಂತರದಲ್ಲಿ, ಒಡಿಶಾ ತಂಡ ಉತ್ತರಪ್ರದೇಶ ತಂಡವನ್ನು 35-09, 35-15 ಅಂತರದಲ್ಲಿ, ರಾಜಸ್ಥಾನ ತಂಡ ಪಂಜಾಬ್ ತಂಡವನ್ನು 35-24, 35-29 ಅಂತರದಲ್ಲಿ, ಬಿಹಾರ ತಂಡ ಹಿಮಾಚಲ ಪ್ರದೇಶ ತಂಡವನ್ನು 35-09, 35-25 ಅಂತರದಲ್ಲಿ, ಪುದುಚೆರಿ ತಂಡ ಎನ್ ಸಿ ಆರ್ ತಂಡವನ್ನು 35-21, 35-27 ಅಂತರದಲ್ಲಿ, ಡಿ.ಎ.ಇ ತಂಡ ತ್ರಿಪುರ ತಂಡವನ್ನು 35-14, 35-23 ಅಂತರದಲ್ಲಿ, ಪಶ್ಚಿಮ ಬಂಗಾಳ ತಂಡ ಲಡಾಕ್ ತಂಡವನ್ನು 35-15, 35-20 ಅಂತರದಲ್ಲಿ, ಕೇರಳ ತಂಡ ಅಸ್ಸಾಂ ತಂಡವನ್ನು 35-08, 35-06 ಅಂತರದಲ್ಲಿ, ಕೆನರಾ ಬ್ಯಾಂಕ್ ತಂಡ ಉತ್ತರ ಪ್ರದೇಶ ತಂಡವನ್ನು 35-08, 35-21 ಅಂತರದಲ್ಲಿ ಒಡಿಶಾ ತಂಡ ಜಮ್ಮು ಕಾಶ್ಮೀರ ತಂಡವನ್ನು 35-08, 35-33 ಅಂತರದಲ್ಲಿ ಮಣಿಸಿ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿತು.

ಮಹಿಳಾ ವಿಭಾಗ:

ತಮಿಳುನಾಡು ತಂಡ ರಾಜಸ್ಥಾನ ತಂಡವನ್ನು 35-14, 35-10 ಅಂತರದಲ್ಲಿ, ಚತ್ತೀಸ್ಗಡ್ ತಂಡ ಬಿಹಾರ್ ತಂಡವನ್ನು 35-29, 35-32ಅಂತರದಲ್ಲಿ, ಆಂಧ್ರಪ್ರದೇಶ ತಂಡ ತೆಲಂಗಾಣ ತಂಡವನ್ನು 35-16, 35-16 ಅಂತರದಲ್ಲಿ, ಕೇರಳ ತಂಡ ಮಧ್ಯಪ್ರದೇಶ ತಂಡವನ್ನು 35-09, 35-09 ಅಂತರದಲ್ಲಿ, ಪಂಜಾಬ್ ತಂಡ ಉತ್ತರಪ್ರದೇಶ ತಂಡವನ್ನು 35-12, 35-19 ಅಂತರದಲ್ಲಿ, ದೆಹಲಿ ತಂಡ ಜಮ್ಮು ಕಾಶ್ಮೀರ ತಂಡವನ್ನು 35-13, 35-21 ಅಂತರದಲ್ಲಿ, ಜಾರ್ಖಂಡ್ ತಂಡ ಒಡಿಶಾ ತಂಡವನ್ನು 35-20, 35-24 ಅಂತರದಲ್ಲಿ, ಪಶ್ಚಿಮ ಬಂಗಾಳ ತಂಡ ಹಿಮಾಚಲ ಪ್ರದೇಶ ತಂಡವನ್ನು 35-18, 35-23 ಅಂತರದಲ್ಲಿ, ಬಿಹಾರ್ ತಂಡ ರಾಜಸ್ಥಾನ್ ತಂಡವನ್ನು 35-33, 35-31 ಅಂತರದಲ್ಲಿ, ಹರಿಯಾಣ ತಂಡ ತ್ರಿಪುರ ತಂಡವನ್ನು 35-27, 35-20 ಅಂತರದಲ್ಲಿ, ಮಹಾರಾಷ್ಟ್ರ ತಂಡ ತೆಲಂಗಾಣ ತಂಡವನ್ನು 35-29, 35-22 ಅಂತರದಲ್ಲಿ, ಪುದುಚೇರಿ ತಂಡ ಚಂಡೀಗಡ ತಂಡವನ್ನು 35-07, 35-15 ಅಂತರದಲ್ಲಿ ಮಣಿಸಿ ಮುಂದಿನ ಸುತ್ತಿಗೆ ಕಾಲಿಟ್ಟಿದೆ.

Edited By : Vijay Kumar
Kshetra Samachara

Kshetra Samachara

03/03/2022 05:42 pm

Cinque Terre

2.31 K

Cinque Terre

0

ಸಂಬಂಧಿತ ಸುದ್ದಿ