ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "Ride To Rann To Kutch" ಸಾಹಸ ಯಾನ... 'ಬೈಕರ್ನೀಸ್' ಆಗಮನ

ಮಂಗಳೂರು: ಮಹಿಳಾ ಸಬಲೀಕರಣ ಬೆಂಬಲಿಸಲೆಂದು Ride To Rann To Kutch" ಸಾಹಸ ಯಾನ ಕೈಗೊಂಡಿದ್ದ ಮಂಗಳೂರಿನ ನಾಲ್ವರು ಬೈಕ್ ರೈಡರ್ಸ್ ಯುವತಿಯರು ತವರಿಗೆ ವಾಪಸ್ ಆಗಿದ್ದಾರೆ.

ನಿನ್ನೆ ಇಳಿಸಂಜೆ 7 ಗಂಟೆಗೆ ಕದ್ರಿ ಪಾರ್ಕ್ ಬಳಿ ತಮ್ಮ ಸಾಹಸ ಗಟ್ಟಿಯಾನ ಕೊನೆಗೊಳಿಸಿದ್ದಾರೆ. ಈ ಸಂದರ್ಭ ತಮ್ಮ ಬೆಂಬಲಿಗರು, ಕುಟುಂಬಸ್ಥರೊಂದಿಗೆ ಕುಣಿದು ಕುಪ್ಪಳಿಸಿದರು ಈ ಸಾಹಸಿ ವನಿತೆಯರು. ಡಿ.24ರಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಿಂದ ಗುಜರಾತ್ ನ ಕಛ್‌ ಗೆ ಪ್ರಯಾಣ ಬೆಳೆಸಿದ್ದ ಈ ಲೇಡಿ ರೈಡರ್ಸ್ 4 ಸಾವಿರ ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಿ, ಮರಳಿ ತವರಿಗೆ ಆಗಮಿಸಿದ್ದಾರೆ. ಈ ಮೂಲಕ 11 ದಿನಗಳ ಪ್ರಯಾಣ ಮುಗಿಸಿ ಮತ್ತೆ ಮಂಗಳೂರು ತಲುಪಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಗಳಾದ ಕೃತಿ ಉಚ್ಚಿಲ್, ಅಪೂರ್ವ, ಟೆಕ್ಸ್ ಟೈಲ್ಸ್ ಮಾಲಕಿ ಪೂಜಾ ಜೈನ್ ಹಾಗೂ ಮೆಡಿಕಲ್ ರೆಪ್ ದಿವ್ಯಾ ಪೂಜಾರಿ ಅವರು ಕಛ್ ಗೆ ಬೈಕ್ ರೈಡ್ ಮಾಡಿರುವ ಗಟ್ಟಿಗಿತ್ತಿಯರು. ʼಮಂಗಳೂರು ಬೈಕರ್ನಿʼ ಎಂಬ ತಂಡ ಕಟ್ಟಿರುವ ಈ ಯುವತಿಯರು ಈಗಾಗಲೇ ರಾಮೇಶ್ವರ, ಕನ್ಯಾಕುಮಾರಿ, ಊಟಿ, ಕೊಡೈಕನಾಲ್ ಮತ್ತಿತರ ಕಡೆಗೆ ಬೈಕ್ ರೈಡ್ ಮಾಡಿ ಧೈರ್ಯ-ಸಾಹಸ ಮೆರೆದಿದ್ದಾರೆ.

Edited By : Shivu K
Kshetra Samachara

Kshetra Samachara

06/01/2022 06:07 pm

Cinque Terre

17.59 K

Cinque Terre

0

ಸಂಬಂಧಿತ ಸುದ್ದಿ