ಮಣಿಪಾಲ: ವಿದ್ಯಾರ್ಥಿಗಳ ಶಾರೀರಿಕ ಮತ್ತು ಮಾನಸಿಕ ದೃಢತೆ ಯನ್ನು ಬೆಳೆಸುವ ಜ್ಞಾನ ಹಾಗೂ ಪರಿಪಾಠವನ್ನು ನೀಡದ ಉನ್ನತ ಶಿಕ್ಷಣ ಪರಿಪೂರ್ಣವಲ್ಲ ಎಂದು ಮಣಿಪಾಲ ಮಾಹೆಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕ ಡಾ.ರವೀಂದ್ರನಾಥ ನಾಯಕ್ ತಿಳಿಸಿದ್ದಾರೆ.
ಸ್ವಾತಂತ್ರದ ಅಮೃತ ಮಹೋತ್ಸವ ಹಾಗೂ ಫಿಟ್ ಇಂಡಿಯಾ ಫ್ರೀಡಂ ರನ್ ಹಿನ್ನೆಲೆಯಲ್ಲಿ ಆಯೋಜಿಸಲಾದ ಎಂಐಎಂ ಸಂಸ್ಥೆಯ ಆಟೋಟ ಸಂಘದಲ್ಲಿ ವ್ಯಾಯಾಮಕ್ಕಾಗಿ ವಾಕಿಂಗ್ ಮತ್ತು ಜಾಂಗಿಗ್ ಮಾಡುವ ವಿದ್ಯಾರ್ಥಿ ಸಮೂಹವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತೊಬಾ ಕುರೇಶಿ, ಆಕಾಶ್ ಕೆ.ಎಂ., ಅಶ್ವಿನ್ ಕೆ.ಎನ್ ,ಕೃಷ್ಣ ಪ್ರಸಾದ್, ಪ್ರಖ್ಯಾತ್ ಕುಮಾರ್, ಆಟೋಟ ಸಂಘದ ಸಂಯೋಜಕ ಡಾ. ಕವಿತಾ ಟಿ.ಸಿ., ದೈಹಿಕ ಶಿಕ್ಷಣ ನಿರ್ದೇಶಕ ಡಾ.ಉಪೇಂದ್ರ ನಾಯಕ್ ಉಪಸ್ಥಿತರಿದ್ದರು. ಪ್ರತಿನಿತ್ಯ ಆಟೋಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರವನ್ನು ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ಎಂಬಿಎ ವಿದ್ಯಾರ್ಥಿನಿ ರೇವತಿ ರಮೇಶ್ ಸ್ವಾಗತಿಸಿದರು. ವಸುಂಧರಾ ಠಾಕೂರ್ ವಂದಿಸಿದರು.
Kshetra Samachara
28/09/2021 02:45 pm