ತೆಲಂಗಾಣದ ವಿಜಯಭಾಸ್ಕರ ರೆಡ್ಡಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ M-1 ವಿಭಾಗದ ಸ್ಪರ್ಧೆಯಲ್ಲಿ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ ಇಂದು 3 ಚಿನ್ನದ ಪದಕ ಹಾಗೂ1 ಬೆಳ್ಳಿ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
ಸತೀಶ್, ಕಳೆದ ಬಾರಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯ ಮಾಸ್ಟರ್ ಒಂದನೇ ವಿಭಾಗದಲ್ಲಿಯೂ 2 ಚಿನ್ನದ ಪದಕ, 2 ಬೆಳ್ಳಿ ಪದಕ ಹಾಗೂ ಏಷಿಯನ್ ಫಸ್ಟ್ ರನ್ನರ್ ಅಪ್ ಬಲಿಷ್ಠ ಪುರುಷ ಪ್ರಶಸ್ತಿ-2022 ಮುಡಿಗೇರಿಸಿಕೊಂಡಿದ್ದರು.
ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಸತೀಶ್ ಖಾರ್ವಿ ಕ್ರೀಡಾ ಕ್ಷೇತ್ರದಲ್ಲಿ ಕುಂದಾಪುರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸತೀಶ್ ಖಾರ್ವಿಯವರ ಕ್ರೀಡಾ ಸಾಧನೆಯನ್ನು ಗುರುತಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಭಿನಂದಿಸಿದ್ದರು.
PublicNext
08/07/2022 06:52 pm