ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಶ್ವದಾಖಲೆಗಳ ಸರದಾರಿಣಿಯಿಂದ ಮತ್ತೊಂದು ದಾಖಲೆಗೆ ಸಜ್ಹು

ಉಡುಪಿ: ಉಡುಪಿ ಜಿಲ್ಲೆಯ ಉದ್ಯಾವರದ ಪಿತ್ರೋಡಿಯ 5 ವಿಶ್ವ ದಾಖಲೆಗಳ ಸರದಾರಿಣಿ ತನುಶ್ರೀ ಪಿತ್ರೋಡಿ ಇನ್ನೊಂದು ದಾಖಲೆಗೆ ಹೊರಟು ನಿಂತಿದ್ದಾರೆ. ಇದೇ ಫೆಬ್ರವರಿ ೬ರಂದು ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗೋಲ್ಡನ್ ಬುಕ್ ಅಫ್ ರೆಕಾರ್ಡ್ಸ್ ಗಾಗಿ ದಾಖಲೆಯೊಂದನ್ನು ಮಾಡಲು ಹೊರಟಿದ್ದಾರೆ.

ಈ ಬಾರಿ ತನುಶ್ರೀ ಅವರು 'ಮೋಸ್ಟ್ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ಪಿಂಗ್ ಇನ್ ಒನ್ ಮಿನಿಟ್' ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ತನುಶ್ರೀ ಮತ್ತು ಹೆತ್ತವರು ಈ ದಾಖಲೆಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾಗಿ ಹೇಳಿದರು.

ತನುಶ್ರೀ ಹೆಸರಿನಲ್ಲಿ ಈಗಾಗಲೇ 5 ದಾಖಲೆಗಳಿವೆ. ಜೊತೆಗೆ ಈಕೆ ನಾಟ್ಯಮಯೂರಿ ಕೂಡ. ಯೋಗರತ್ನ ಬಿರುದಾಂಕಿತೆ ತನುಶ್ರೀ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೂಡ. ಈ ಪುಟಾಣಿ ಯೋಗಾಸನದಲ್ಲಿ ಇನ್ನೊಂದು ದಾಖಲೆಗಾಗಿ ಸಜ್ಜಾಗಿದ್ದು ಆಲ್ ದಿ ಬೆಸ್ಡ್ ಹೇಳೋಣ.

Edited By : Manjunath H D
Kshetra Samachara

Kshetra Samachara

04/02/2021 03:26 pm

Cinque Terre

31.24 K

Cinque Terre

8

ಸಂಬಂಧಿತ ಸುದ್ದಿ