ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೇರಳದ ಕಲರಿ ಪಯಟ್ಟು ಕಲೆಗೆ ಉಡುಪಿ - ಮಲ್ಪೆ ಜನರು ಫಿದಾ..!

ಮಲ್ಪೆ: ಕೇರಳದ ಜನಪ್ರಿಯ ಕಲೆ ಕಲರಿ ಪಯಟ್ಟು. ಈ ಜನಪ್ರಿಯ ಕಲೆ, ಕರ್ನಾಟಕದಲ್ಲಿ ಕಾಣಸಿಗುವುದು ಅಪರೂಪ. ಹೀಗಾಗಿ ಇಂತಹ ಕಲೆಯನ್ನು ಉಡುಪಿ ಜನತೆಗೂ ಪರಿಚಯ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಉಡುಪಿಯ ಮಲ್ಪೆ ಕಡಲ ತೀರದ ಸಮೀಪ ಕಲರಿ ಪಯಟ್ಟು ಪ್ರದರ್ಶನ ಆಯೋಜನೆ ಮಾಡಲಾಯಿತು.

ಕೇರಳದಿಂದ ಬಂದ ಕಲರಿ ಪಯಟ್ಟು ತಂಡದ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಯುವಕ ಯುವತಿಯರು ಅದ್ಭುತ ಪ್ರದರ್ಶನ ನೀಡಿದರು. ಇವರು ಪ್ರದರ್ಶಿಸಿದ ಕತ್ತಿ ಕಾಳಗ, ಈಟಿ ಕಾಳಗ ಭಯ ಹುಟ್ಟಿಸುಂತಿತ್ತು. ಹಿಂದಿನ ರಾಜರುಗಳ ಕಾಲದಲ್ಲಿ ಯಾವ ರೀತಿಯಲ್ಲಿ ಅರಸರು ಕಾದಾಟ ಮಾಡುತ್ತಿದ್ದರು, ಸೈನಿಕರು ತಮ್ಮ ರಾಜ್ಯವನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದರು ಅನ್ನೋದನ್ನು ಯುವಕ ಯುವತಿಯರು ಆಕರ್ಷಕ ರೀತಿಯಲ್ಲಿ ಪ್ರದರ್ಶನ ನೀಡಿದರು. ಸುರಿವ ಮಳೆಯನ್ನೂ ಲೆಕ್ಕಿಸದೇ ಚಿಕ್ಕ ಮಕ್ಕಳು ಕೂಡ ಕಲರಿ ಪಯಟ್ಟು ಪ್ರದರ್ಶನ ನೀಡಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದರು.

Edited By : Manjunath H D
PublicNext

PublicNext

23/08/2022 06:44 pm

Cinque Terre

33.87 K

Cinque Terre

0

ಸಂಬಂಧಿತ ಸುದ್ದಿ