ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗದ್ದೆಗಿಳಿದು ಸಂಭ್ರಮಿಸಿದ ಪೊಲೀಸ್ ಕಮಿಷನರ್ ಹಿಮ್ಮುಖ ಓಟದಲ್ಲಿ‌ ಪ್ರಥಮ!

ಮಂಗಳೂರು: ನಗರದ ಹೊರವಲಯದಲ್ಲಿರುವ ಎಕ್ಕಾರು ಬಡಕೆರೆ ಜಾರಂದಾಯ ದೈವಸ್ಥಾನದ ವಠಾರದಲ್ಲಿ ಇಂದು 'ಕಂಡಡೊಂಜಿ‌ ದಿನ' ಕಾರ್ಯಕ್ರಮ ನಡೆದಿತ್ತು‌. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಕೆಸರು ಗದ್ದೆಗಿಳಿದು ಸಂಭ್ರಮಿಸಿದರು.

'ವಿಶ್ವ ಮಣ್ಣಿನ ದಿನಾಚರಣೆ' ಪ್ರಯುಕ್ತ ಎಕ್ಕಾರಿನ ವಿಜಯ ಯುವ ಸಂಗಮ ಹಾಗೂ ಸರ್ಕಸ್ ತುಳು ಸಿನಿಮಾ ಇದರ ಸಂಯೋಗದಲ್ಲಿ ಇಂದು 'ಕಂಡಡೊಂಜಿ‌ ದಿನ' ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಕೆಸರು ಗದ್ದೆಗಿಳಿದು ಹಿಮ್ಮುಖ ಓಟದಲ್ಲಿ ಸ್ಪರ್ಧಿಸಿ ಪ್ರಥಮ ಬಹುಮಾನ ಗಳಿಸಿದರು.

ಈ ಕಾರ್ಯಕ್ರಮದಲ್ಲಿ ಗದ್ದೆಯ ಕೆಸರಿನಲ್ಲಿ ವಿಶೇಷ ಸ್ಪರ್ಧೆಗಳು ಆಯೋಜನೆಗೊಂಡಿತ್ತು. ರೈನ್ ಡ್ಯಾನ್ಸ್, ಮೂರು ಕಾಲಿನ ಓಟ, ಹಾಳೆ ಬಂಡಿ ಓಟ, ನಿಧಿ ಹುಡುಕಾಟ, ಕಬ್ಬಡ್ಡಿ, ವಾಲಿಬಾಲ್ ಮುಂತಾದ ಸ್ಪರ್ಧೆಗಳಿತ್ತು. ಅಲ್ಲದೆ ವಿವಿಧ ವಸ್ತುಗಳ ಪ್ರದರ್ಶನ ಮಾರಾಟ, ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ಆಯೋಜನೆಗೊಂಡಿತ್ತು. ಸಿನಿಮಾ, ರಂಗ, ಸಂಗೀತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು ಆಯೋಜನೆಗೊಂಡಿತ್ತು.

Edited By : Nagesh Gaonkar
Kshetra Samachara

Kshetra Samachara

05/12/2021 09:15 pm

Cinque Terre

18.71 K

Cinque Terre

3

ಸಂಬಂಧಿತ ಸುದ್ದಿ