ಮಣಿಪಾಲ: ಉಡುಪಿಯ ಪರ್ಕಳ ಪೇಟೆಯಲ್ಲಿ ಎಂಐಟಿ ಉದ್ಯೋಗಿಯೊಬ್ಬರು ಆವಿಷ್ಕರಿಸಿದ ಟೆಲಿಸ್ಕೋಪ್ ಮೂಲಕ ರಾತ್ರಿ ಗ್ರಹಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಮಣಿಪಾಲ ಎಂಐಟಿ ಉದ್ಯೋಗಿ ಆರ್ ಮನೋಹರ್ ಅವರು ಈ ಟೆಲಿಸ್ಕೋಪನ್ನು ಅವಿಷ್ಕರಿಸಿದ್ದು ,ಇದಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.ನಿನ್ನೆ ಭೂಮಿಗೆ ಹತ್ತಿರವಾಗಿ ಕಾಣಿಸುತ್ತಿದ್ದ ಗುರು, ಶುಕ್ರ, ಶನಿ ಗ್ರಹಗಳನ್ನು ಟೆಲಿಸ್ಕೋಪ್ ಮೂಲಕ ಖಗೋಳಾಸಕ್ತರು ವೀಕ್ಷಿಸಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರ ವೀಕ್ಷಣೆಗಾಗಿ ಸ್ಥಳೀಯರಾದ ಗಣೇಶ್ ರಾಜ್ ಸರಳೆಬೆಟ್ಟು ಈ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭ ಜಯ ಶೆಟ್ಟಿ ಬನ್ನಂಜೆ ,ಸಿಸ್ಟರ್ ಗೀತಾ, ಮೋಹನ್ ದಾಸ್ ನಾಯಕ್, ವಾಲ್ಟರ್ ಡಿಸೋಜ ಕೊಳಲಗಿರಿ ರಾಜೇಶ್ ಪ್ರಭು ಪರ್ಕಳ, ಪ್ರಕಾಶ್ ನಾಯ್ಕ್, ರಾಮಣ್ಣ ನಾಯ್ಕ್ ಹಿರಿಯಡ್ಕ, ಸುಧೀರ್ ಶೆಟ್ಟಿ ಹಿರಿಯಡ್ಕ,ರಾಜೇಶ್ ಪ್ರಭು ಮೊದಲಾದವರು ಜೊತೆಗಿದ್ದು ಗ್ರಹಗಳ ವೀಕ್ಷಣೆ ನಡೆಸಿದರು.
Kshetra Samachara
08/12/2021 09:58 am