ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೈಗಾರಿಕೆ ತ್ಯಾಜ್ಯದಿಂದ ಜಲಚರಗಳ ಮಾರಣ ಹೋಮ : ಕ್ಯಾನ್ಸರ್ ಭೀತಿ

ಮಂಗಳೂರು: ಮಂಗಳೂರು ನಗರ ಅತಿದೊಡ್ಡ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿದೆ. ಈ ಕೈಗಾರಿಕೆಗಳ ಪರಿಸರ ಮಾರಕ ತ್ಯಾಜ್ಯವು ನೇರವಾಗಿ ಸುತ್ತಮುತ್ತಲಿನ ನದಿಯನ್ನು ಸೇರುತ್ತಿರುವ ಪರಿಣಾಮ ಜಲಚರಗಳ ಮಾರಣ ಹೋಮವಾಗುತ್ತಿದೆ. ಜೊತೆಗೆ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಕ್ಯಾನ್ಸರ್ ರೋಗದ ಭೀತಿ ಎದುರಾಗಿದೆ ಎಂದು ಇತ್ತೀಚೆಗೆ ಅಧ್ಯಯನ ಪ್ರವಾಸ ನಡೆಸಿರುವ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯು ಆತಂಕ ವ್ಯಕ್ತಪಡಿಸಿತ್ತು.

ಅಲ್ಲದೆ ಈ ಕೈಗಾರಿಕಾ ವಲಯಗಳಲ್ಲಿ ವಾಸಿಸುವರಲ್ಲಿ ಶ್ವಾಸಕೋಶದ ಸಮಸ್ಯೆ, ದೀರ್ಘಕಾಲದ ಕೆಮ್ಮು-ಕಫ, ಚರ್ಮವ್ಯಾಧಿಗಳು ರೋಗವೂ ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಅಧ್ಯಯನಕ್ಕೆ ಬಂದಿದ್ದ ಎಂಎಲ್ ಸಿಗಳ ತಂಡ ನಗರದ ಕೈಗಾರಿಕಾ ವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವರದಿಯನ್ನು ತರಿಸಿ ಮಾಹಿತಿ ಪಡೆದಿತ್ತು.

ಆಗ ಬಜ್ಪೆ, ಸುರತ್ಕಲ್, ಕುಳಾಯಿ, ಕಾಟಿಪಳ್ಳ ಭಾಗಗಳಲ್ಲಿ ವಾಸಿಸುವ ಜನರಲ್ಲಿ ದಿನವೊಂದಕ್ಕೆ ಆರೋಗ್ಯ ಕೇಂದ್ರಗಳಿಗೆ ಬರುವ 4-5 ಮಂದಿ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ. ಮಾತನಾಡಿ, ಈ ಕಾಯಿಲೆಗಳು ಕೈಗಾರಿಕೆಯ ದುಷ್ಪರಿಣಾಮಗಳಿಂದಲೇ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವುದು ಕಷ್ಟ. ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಇರಿಸಿಕೊಂಡು ರೋಗ ಕಾಣಿಸಿಕೊಂಡಿರುವ ನಾಗರಿಕರು ಈ ಪ್ರದೇಶದಲ್ಲಿ ಎಷ್ಟು ಕಾಲದಿಂದ ವಾಸವಾಗಿದ್ದಾರೆ.

ಪರಿಸರ ಮಾಲಿನ್ಯದಿಂದಲೇ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆಯೇ ಎಂಬ ಕೂಲಂಕಷ ಅವಲೋಕನ ಮಾಡಬೇಕಾಗುತ್ತದೆ. ಆದ್ದರಿಂದ ಇನ್ನಷ್ಟು ಜನರ ಆರೋಗ್ಯ ಸಮಸ್ಯೆಗಳ ಕುರಿತು ವಿಶ್ಲೇಷಣೆ ನಡೆಸಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

Edited By : Shivu K
Kshetra Samachara

Kshetra Samachara

08/05/2022 09:28 am

Cinque Terre

12.32 K

Cinque Terre

0