ವರದಿ: ರಹೀಂ ಉಜಿರೆ
ಮಟ್ಟು: ಮಟ್ಟುಗುಳ್ಳ ....ಇದು ಪೇಟೆಂಟ್ ಪಡೆದ ಕರಾವಳಿಯ ಏಕಮಾತ್ರ ತರಕಾರಿ ಬೆಳೆ. ಉಡುಪಿಯ ಕಟಪಾಡಿಯ ಮಟ್ಟು ಎಂಬ ಪ್ರದೇಶದಲ್ಲಿ ಬೆಳೆಯುವ ಈ ತರಕಾರಿಗೆ ಉಡುಪಿ ಮಾತ್ರವಲ್ಲದೇ ಮುಂಬೈ ಹಾಗೂ ವಿದೇಶದಲ್ಲೂ ಬಾರೀ ಬೇಡಿಕೆ ಇದೆ. ಇಂತಹ ವಿಶೇಷ ಬೆಳೆಗೆ ಸ್ಥಳೀಯರು ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದಾರೆ....
ಉಡುಪಿಯ ಮಟ್ಟು ಪ್ರದೇಶದಲ್ಲಿ ಸ್ಥಳೀಯರು ಸಣ್ಣ ಪುಟ್ಟ ಜಾಗದಲ್ಲಿ ಕಷ್ಟ ಪಟ್ಟು ಮಟ್ಟುಗುಳ್ಳ ಬೆಳೆ ಬೆಳೆಯುತ್ತಾರೆ.ಇವರ್ಯಾರೂ ಶ್ರೀಮಂತರೇನಲ್ಲ.ಮಟ್ಟು ಗುಳ್ಳ ಬೆಳೆಯುವುದಕ್ಕೆ ಸಾವಿರಾರು ರೂ ಖರ್ಚಾಗುತ್ತದೆ.ತಕ್ಕಮಟ್ಟಿನ ಲಾಭವೂ ಇದೆ.ಇದನ್ನೇ ನಂಬಿ ಜೀವನ ಸಾಗಿಸುವ ಹಲವು ಕುಟುಂಬಗಳು ಮಟ್ಟು ಕಟಪಾಡಿ ಭಾಗದಲ್ಲಿವೆ.ತಂತ್ರಜ್ಞಾನ ಮುಂದುವರೆದಂತೆಯೆಯೇ ತೋಟಗಾರಿಕೆ ಬೆಳೆಯಲ್ಲೂ ಅದನ್ನು ಅಳವಡಿಸಲಾಗುತ್ತದೆ.ಇದೀಗ ಮಟ್ಟುಗುಳ್ಳ ಬೆಳೆಗಾರರು ಮರ್ಸಿನ್ ಶೀಟ್ ತಂತ್ರಜ್ಞಾನ ಅಳವಡಿಸಿ ಮಟ್ಟುಗುಳ್ಳ ಬೆಳೆಯತೊಡಗಿದ್ದಾರೆ.
ಈ ಹೊಸ ತಂತ್ರಜ್ಞಾನದ ದಿಂದ ಕಳೆ ಸಮಸ್ಯೆ ಇರುವುದಿಲ್ಲ. ಮಾತ್ರವಲ್ಲ ಇದರಲ್ಲಿ ಇಳುವರಿಯೂ ಜಾಸ್ತಿ, ಲಾಭವೂ ಜಾಸ್ತಿ.ಇನ್ನೊಂದು ಲಾಭವೆಂದರೆ ಪ್ರತೀ ವರ್ಷ ಅಕ್ಟೋಬರ್ ನವೆಂಬರ್ ಹೊತ್ತಿಗೆ ಮಟ್ಟುಗುಳ್ಳ ಗಿಡದ ಸಾಂಪ್ರದಾಯಿಕ ನಾಟಿ ಕಾರ್ಯ ಪ್ರಾರಂಭವಾದರೆ,ಈ ಮರ್ಸಿನ್ ತಂತ್ರಜ್ಞಾನದಲ್ಲಿ ಸೆಪ್ಟೆಂಬರ್ ನಲ್ಲೇ ಗಿಡ ನೆಡುವ ಕಾರ್ಯ ಆರಂಭವಾಗಿದೆ.ಹೀಗಾಗಿ ಇದರಿಂದ ಅನೇಕ ಪ್ರಯೋಜನಗಳಿವೆ ಎನ್ನುತ್ತಾರೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡವರು.
ಕಳೆದ ವರ್ಷ ಮಟ್ಟುಗುಳ್ಳ ಬೆಳೆಗಾರರು, ಚಿನ್ನ ಅಡವಿಟ್ಟು, ಬ್ಯಾಂಕ್ ಸಾಲ ಮಾಡಿ ಕೃಷಿ ಮಾಡಿದ್ದರು,
ಗುಳ್ಳದ ಗಿಡ ದೊಡ್ಡದಾಗಿ ಇಳುವರಿಯೂ ಉತ್ತವಾಗಿತ್ತು. ಇನ್ನೇನು ಕೊಯಿಲು ಮಾಡಬೇಕು ಎನ್ನುವಷ್ಟರಲ್ಲಿ ಬಾರೀ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿತ್ತು. ಆದರೆ ಈ ಬಾರಿ ಹೊಸ ತಂತ್ರಜ್ಞಾನ ಅಳವಡಿಸಿ ಅಧಿಕ ಇಳುವರಿ ಬರುವ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯ ಬೆಳೆಗಾರರು.
Kshetra Samachara
24/09/2021 06:43 pm