ಮಂಗಳೂರು: ನಗರದ ಮೂಡುಶೆಡ್ಡೆಯ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಮದರಸದ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಮಿಲಾದ್ ಫೆಸ್ಟ್-2022 ಕಾರ್ಯಕ್ರಮ ನಡೆಯಿತು.
ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಮದರಸ ಆವರಣದ ಮರ್ಹೂಂ ಶಂಸುಲ್ ಉಲಮಾ ವೇದಿಕೆಯಲ್ಲಿ ನೆರವೇರಿದ ಈ ಕಾರ್ಯಕ್ರಮವನ್ನು ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ಉದ್ಘಾಟಿಸಿದರು. ಈ ವೇಳೆ ಮದ್ರಸಾದ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅಲ್ಲದೆ ನೆಕ್ಜ್ ಮಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಂದ ಮಿಲಾದ್ ರ್‍ಯಾಲಿ, ದಫ್ಪ್, ಶಾಂತಿ ಜಾಥ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ ಅಧ್ಯಕ್ಷ ಮಯ್ಯದ್ದಿ, ಮದರಸ ಪ್ರಾಧ್ಯಾಪಕರಾದ ಶಾಕಿರ್ ನಿಝಾಮಿ, ಜಾಬಿರ್ ಜೌಹರಿ, ಬದ್ರಿಯಾ ಯಂಗ್ ಮೆನ್ಸ್ ಅಧ್ಯಕ್ಷ ನೌಶಾದ್, ಹಿರಿಯರಾದ ಹಾಜಿ ಮಹಮ್ಮದ್ ಹನೀಫ್ ಮೌಲಾವಿ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/10/2022 12:20 pm