ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿದ್ಯಾರಂಭ ಸಂಪ್ರದಾಯ: ಏನಿದರ ಮಹತ್ವ?

ವರದಿ: ರಹೀಂ ಉಜಿರೆ

ಕೊಲ್ಲೂರು: ಕೇವಲ ರಾಜ್ಯವಷ್ಟೇ ಅಲ್ಲದೆ ಪರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರನ್ನು ಸೆಳೆಯುವ ಏಕೈಕ ದೇವಸ್ಥಾನ ,ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ.ದೇವಿಯ ಈ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ ವೈಭವದಿಂದ ಕೂಡಿರುತ್ತದೆ.ವಿಜಯ ದಶಮಿ ದಿನವಾದ ಇಂದು ನೂರಾರು ಮಕ್ಕಳು ವಿದ್ಯಾರಂಭ ಮಾಡಿದರು.

ಏನಿದು ವಿದ್ಯಾರಂಭ?

ನವರಾತ್ರಿ ಉತ್ಸವದ ಕೊನೆಯ ದಿನದಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ, ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶವನ್ನು ನೀಡಲಾಗುತ್ತದೆ. ಇದು ಮಕ್ಕಳ ವಿದ್ಯಾರಂಭದ ದ್ಯೋತಕ. ಇದಕ್ಕೆಂದೇ ದೇವಸ್ಥಾನಕ್ಕೆ ಕೇರಳ, ತಮಿಳುನಾಡು ಸಹಿತ ಹಲವು ರಾಜ್ಯಗಳಿಂದ ಪೋಷಕರು ಬರುತ್ತಾರೆ.ತಮ್ಮ ಮಕ್ಕಳನ್ನು ಕರೆತಂದು ಇಲ್ಲಿ ವಿಧಿವತ್ತಾಗಿ ವಿದ್ಯಾರಂಭ ಮಾಡಿಸುತ್ತಾರೆ.ಮಕ್ಕಳು ಇಲ್ಲಿ ವಿದ್ಯಾರಂಭ ಮಾಡಿದರೆ ಮುಂದೆ ಸುಶಿಕ್ಷಿತರಾಗುತ್ತಾರೆ ಎಂಬ ನಂಬಿಕೆ ನೂರಾರು ವರ್ಷಗಳಿಂದಲೂ ಇದೆ.

ಇವತ್ತು ಪುಟ್ಟ ಮಕ್ಕಳಿಗೆ ಅರ್ಚಕರು ಅಕ್ಕಿಕಾಳಿನಲ್ಲಿ ಮೊದಲ ವಿದ್ಯಾದೀಕ್ಷೆ ನೀಡಿದರು. ಮುಂಜಾನೆ ಪ್ರಾರಂಭಗೊಂಡ ಅಕ್ಷರಾಭ್ಯಾಸ ಮಧ್ಯಾಹ್ನದ ತನಕವೂ ನಡೆಯುತ್ತದೆ. ಅಕ್ಕಿಕಾಳಿನಲ್ಲಿ ಅಕ್ಷರ ಬರೆಯುವ ಮೂಲಕ ಮತ್ತು ನಾಲಗೆಯಲ್ಲಿ ಅಕ್ಷರ ಮೂಡಿಸುವ ಮೂಲಕ ಅಕ್ಷರ ದೀಕ್ಷೆ ನೀಡಲಾಗುತ್ತದೆ. ನಂತರ ದೇವಿಯ ಸನ್ನಿಧಿಯಲ್ಲಿ ಮಕ್ಕಳ ಭವಿಷ್ಯಕ್ಕೆ ಪ್ರಾರ್ಥಿಸುವುದು ರೂಢಿ.

ಉಳಿದಂತೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಇಂದು ಭಕ್ತಿ ಶ್ರದ್ಧೆಯ ವಿಜಯದಶಮಿ ನಡೆಯಿತು. ನವರಾತ್ರಿಯ ಕೊನೆಯ ದಿನವಾದ ಇಂದು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ನಡೆಯಿತು.

Edited By : Nagesh Gaonkar
PublicNext

PublicNext

05/10/2022 03:41 pm

Cinque Terre

24.48 K

Cinque Terre

0

ಸಂಬಂಧಿತ ಸುದ್ದಿ