ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನವರಾತ್ರಿಗೆ ಮೆರುಗು ತಂದ ದಾಂಡಿಯಾ ನೃತ್ಯ: ಚಿತ್ರರಂಗದ ಗಣ್ಯರು ಭಾಗಿ

ಉಡುಪಿ : ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿಯ ಮಹಿಳಾ ತಂಡದ ನೇತೃತ್ವದಲ್ಲಿ ನಡೆದ ವೈಭವದ ದಾಂಡಿಯಾ ನೃತ್ಯ ಹಬ್ಬಕ್ಕೆ ಮೆರುಗು ತಂದಿತು.ನವರಾತ್ರಿ ಪ್ರಯುಕ್ತ 5ನೇ ವರ್ಷದ ಉಡುಪಿ-ದ.ಕ. ಜಿಲ್ಲೆಯಲ್ಲಿ ಅತೀ ದೊಡ್ಡ ಗುಜರಾತಿನ ಸಾಂಪ್ರದಾಯಿಕ “ಉಡುಪಿ ದಾಂಡಿಯಾ-2022′ ನೃತ್ಯ ಕಾರ್ಯ ಕ್ರಮವು ಕಡಿಯಾಳಿ ದೇಗುಲದ ನೂತನ ಶರ್ವಾಣಿ ಕಲ್ಯಾಣ ಮಂಟಪದಲ್ಲಿ ಸಂಪನ್ನಗೊಂಡಿತು.

ಚಿತ್ರನಟ ,ನಿರೂಪಕ ರಮೇಶ್ ಅರವಿಂದ್ ವಿಶೇಷ ಅತಿಥಿಯಾಗಿ ಆಗಮಿಸಿ ದಾಂಡಿಯಾ ನೃತ್ಯಕ್ಜೆ ಸ್ಟೆಪ್ ಹಾಕಿದರು.ಇವರ ಜೊತೆಗೆ ಚಿತ್ರರಂಗದ ಪ್ರಸಿದ್ಧ ಕಲಾವಿದರು ಭಾಗವಹಿಸಿ ಮೆರುಗು ತಂದರು. ನೃತ್ಯದಲ್ಲಿ ಅತ್ಯುತ್ತಮ ಸಾಂಪ್ರದಾಯಿಕ ಉಡುಗೆ, ಅತ್ಯುತ್ತಮ ನೃತ್ಯ, ಅತ್ಯುತ್ತಮ ಜೋಡಿ ನೃತ್ಯಗಳಿಗೆ ಬಹುಮಾನ ನೀಡಲಾಯಿತು. ಮಹಿಳೆಯರು, ಪುರುಷರು ಮತ್ತು ಜೋಡಿ ನೃತ್ಯಕ್ಕೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಗಿತ್ತು.ಗುಜರಾತ್ ನಲ್ಲಿ ಪ್ರಸಿದ್ಧಿ ಪಡೆದ ದಾಂಡಿಯಾ ವೀಕ್ಷಿಸಲು ನೂರಾರು ಜನ ಮುಗಿಬಿದ್ದರು.

Edited By :
PublicNext

PublicNext

03/10/2022 10:46 pm

Cinque Terre

46.55 K

Cinque Terre

2

ಸಂಬಂಧಿತ ಸುದ್ದಿ