ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಚಾರ್ಯ ಮಠ ಶಾರದೋತ್ಸವಕ್ಕೆ ಶತಕ ಸಂಭ್ರಮ; ಸ್ವರ್ಣ ವೀಣೆ, ಮಯೂರ ಸಮರ್ಪಣೆ

ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ಶ್ರೀ ಶಾರದಾ ಮಹೋತ್ಸವವು ಈ ಬಾರಿ 100ರ ಸಂಭ್ರಮದಲ್ಲಿದೆ‌. ಈ ಬಾರಿ ಶಾರದೆಯು ನೂತನ ವಸಂತ ಮಂಟಪದಲ್ಲಿ ಹೊನ್ನಿನ‌ ವೀಣೆ ಹಾಗೂ ಹೊನ್ನಿನ ಮಯೂರದೊಂದಿಗೆ ಕಂಗೊಳಿಸುತ್ತಿದ್ದಾಳೆ.

ಸೆ.26ರಂದು ಶಾರದಾ ಮಾತೆಯ ಪ್ರತಿಷ್ಠಾಪನೆಯು ಶ್ರೀ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು. ಮುಂದಿನ 10 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾರದಾ ಮಹೋತ್ಸವ ನಡೆಯಲಿದೆ.

ಅ.5ರಂದು ಸಂಜೆ 4ಕ್ಕೆ ಶಾರದಾ ಮಾತೆಯ ವಿಸರ್ಜನಾ ಪೂಜೆ ನಡೆಯಲಿದ್ದು, ಅ.6ರಂದು ರಾತ್ರಿ 10 ಗಂಟೆಗೆ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ನಡೆದು, ರಥಬೀದಿಯ ಶ್ರೀ ಮಹಾಮ್ಮಾಯಿ ತೀರ್ಥದಲ್ಲಿ ವಿಸರ್ಜನೆಯಾಗಲಿದೆ.

ಶಾರದಾ ಮಹೋತ್ಸವದ ಶತಮಾನೋತ್ಸವ ಸವಿನೆನಪಿಗೆ ಭಕ್ತರಿಂದ ದೇಣಿಗೆ ರೂಪದಲ್ಲಿ 700 ಗ್ರಾಂ ತೂಕದ ಸ್ವರ್ಣ ನವಿಲು, 6 ಕೆಜಿ ಬೆಳ್ಳಿ, 500 ಗ್ರಾಂ ತೂಕದ ಸ್ವರ್ಣ ವೀಣೆ, 16 ಪವನ್ ನ ಚಿನ್ನದ ಕೈ ಕಡಗ, 35 ಕೆಜಿ ಬೆಳ್ಳಿಯ ನೂತನ ರಜತ ಸಿಂಹಾಸನ ಹಾಗೂ ಪೀಠ ಪ್ರಭಾವಳಿ, 21 ಪವನ್ ನ ಸ್ವರ್ಣದ ಆರತಿ ಶ್ರೀ ಶಾರದಾ ಮಾತೆಗೆ ಸಮರ್ಪಣೆಯಾಗಿದೆ.

Edited By : Nagesh Gaonkar
Kshetra Samachara

Kshetra Samachara

27/09/2022 09:40 am

Cinque Terre

7.31 K

Cinque Terre

0

ಸಂಬಂಧಿತ ಸುದ್ದಿ