ಮಂಗಳೂರು : ಭೂ ಮಸೂದೆ ಕಾನೂನು ಜಾರಿಯ ಬಳಿಕ ಜೈನ ಹಾಗೂ ಬಂಟ ಸಮುದಾಯಗಳು ಆರ್ಥಿಕವಾಗಿ ಪ್ರಬಲವಾಯಿತು ಹಿಂದೆ ಇವರು ಕೆಲಸ ಮಾಡದೆ ಸಂಪಾದನೆಯಿಲ್ಲದೆ ಗೇಣಿಗೆ ಭೂಮಿಯನ್ನು ಒಕ್ಕಲು ನೀಡಿ ಅದರಿಂದ ಬಂದ ಉತ್ಪತ್ತಿಯಿಂದಲೇ ಅವರು ಜೀವನ ನಡೆಸುತ್ತಿದ್ದರು.
ಆದರೆ ಉದ್ಯೋಗ, ವ್ಯಾಪಾರ, ಸಂಪಾದನೆ ಮಾಡಬೇಕು. ಹೆಚ್ಚು ಕಷ್ಟ ಪಡಬೇಕೆಂಬ ಕಲ್ಪನೆ ಬಂದಿರುವುದೇ ಭೂ ಮಸೂದೆ ಕಾನೂನಿಂದ ಎಂದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು. ಹೇಳಿದರು.
ನಗರದ ಬಂಟ್ಸ್ ಹಾಸ್ಟೆಲ್'ನಲ್ಲಿ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾನೂನಿಂದ ಒಂದು ತಲೆಮಾರು ಬಹಳಷ್ಟು ಕಷ್ಟಪಟ್ಟಿದೆ.
ಆದರೆ ಆ ಬಳಿಕದ ತಲೆಮಾರು ಮನೆತೊರೆದು ಪರ ಊರು, ಪರದೇಶಗಳಿಗೆ ಹೋಗಿ ಉದ್ಯೋಗ, ಉದ್ದಿಮೆಯನ್ನು ಅವಲಂಬಿಸಿ ಇಂದು ಪ್ರಬಲವಾದ ಶಕ್ತಿಯಾಗಿ ಪರಿವರ್ತನೆ ಆಗಿದೆ ಎಂದರು.
ಹಣ ಯಾವತ್ತೂ ಶಾಶ್ವತವಲ್ಲ, ಆದ್ದರಿಂದ ವಂಚಿತ ವರ್ಗಕ್ಕೆ ಅವಕಾಶದ ನಿರ್ಮಾಣ ಮಾಡುವ ಮೂಲಕ ಅವರ ಬೆಳವಣಿಗೆಗೆ ಕಾರಣವಾಗಬೇಕು. ಬಂಟರು ಹೊರದೇಶಗಳಲ್ಲಿ ಹೋಗಿ ಮಹತ್ತರವಾದ ಸಾಧನೆ ಮಾಡಿದ್ದಾರೆ. ಮೊದಲು ರಾಷ್ಟ್ರೀಕೃತಗೊಂಡ ಬ್ಯಾಂಕ್ ಗಳಲ್ಲಿ ನಾಲ್ಕು ಬ್ಯಾಂಕ್ ಗಳು ಕರಾವಳಿ ಜಿಲ್ಲೆಯಲ್ಲಿ ಹುಟ್ಟಿದವು. ವಿಜಯಾ ಬ್ಯಾಂಕ್ ನ ಸುಂದರಾಮ ಶೆಟ್ಟರು ಬ್ಯಾಂಕ್ ಅನ್ನು ಅಭಿವೃದ್ಧಿ ಮಾಡಿದ್ದಲ್ಲದೆ, ಜಿಲ್ಲೆಯ ಹಲವರಿಗೆ ಉದ್ಯೋಗ ನೀಡಿ ಜೀವನವನ್ನೂ ಉದ್ದಾರ ಮಾಡಿದ್ದಾರೆ ಎಂದು ಹೇಳಿದರು.
ನಾವು ಎಷ್ಟು ಲೌಕಿಕವಾಗಿ ತೊಡಗಿಕೊಂಡರೂ ನಮ್ಮ ಮನಸ್ಸು ದೇವರತ್ತ ಇರಬೇಕು. ಆದ್ದರಿಂದ ಎಲ್ಲರಲ್ಲೂ ಒಂದು ವಿನಂತಿಯೇನೆಂದರೆ, ನಮಗೆ ಎಷ್ಟೇ ಸಂಪಾದನೆಯಾಗಲಿ, ಅವಕಾಶ ಸಿಗಲಿ, ಸಂಸ್ಕಾರ ಸಂಸ್ಕೃತಿಯನ್ನು ಬಿಡಬಾರದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
Kshetra Samachara
24/09/2022 06:28 pm