ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧರ್ಮಸ್ಥಳ: ದೇವರಿಗಾಗಿ ಅರ್ಧ ಗಂಟೆಗಳ ಕಾಲ ಮೀಸಲಿಡಬೇಕು :ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಧರ್ಮಸ್ಥಳ: ಭಗವಂತನ ಅನುಗ್ರಹ ಸಿಗಬೇಕಾದ್ರೆ ಭಗವಂತನನ್ನು ನೆನೆಯಬೇಕು, ಆರಾಧಿಸಬೇಕು. ಭಕ್ತಿ ಮೂಲಕ ಭಗವಂತನನ್ನು ಒಲಿಸಬಹುದು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನಡೆದ 24 ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ದೇವರಿಗೆ ಸಮರ್ಪಿಸುವ ಪೂಜೆಯಲ್ಲಿ ಭಕ್ತಿ ಇರಬೇಕು. ಭಕ್ತಿ ಬೇಕಂದ್ರೆ ಭಜನೆ ಮಾಡಿ. ಭಕ್ತಿ ನಮ್ಮ ಹೃದಯದಲ್ಲಿ ಇರುತ್ತದೆ. ದಿನದಲ್ಲಿ ನಾವು ಅರ್ಧ ಗಂಟೆಗಳ ಕಾಲ ದೇವರಿಗಾಗಿ ಸಮಯ ಮೀಸಲಿಡಬೇಕು ಎಂದರು.

ಈಗಿನ ಮಕ್ಕಳಿಗೆ ದೇವರ ಕೀರ್ತನೆ ಬರಲ್ಲ. ಎಷ್ಟು ಮನೆಯಲ್ಲಿ ತಾಳ ಇದೆ ಎಂದ ಅವ್ರು ಭಜನಾ ಕಮ್ಮಟದಿಂದ ಮನೆಮನೆಯಲ್ಲಿ ತಾಳ ಇರುತ್ತದೆ ಎಂದರು. ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ ಆಗಿದೆ. ಮನೆ ಮನೆಯಲ್ಲೂ ಭಜನಾ ಸಪ್ತಾಹ ನಡೆಯಲಿ ಎಂದರು.

Edited By : Manjunath H D
Kshetra Samachara

Kshetra Samachara

23/09/2022 07:02 pm

Cinque Terre

14.6 K

Cinque Terre

0

ಸಂಬಂಧಿತ ಸುದ್ದಿ