ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಶೀಮಠಾಧೀಶರ ಚಾತುರ್ಮಾಸ ಸಮಾಪನ

ಮಂಗಳೂರು: ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಶನಿವಾರದಂದು ಮೃತ್ತಿಕಾ ವಿಸರ್ಜನೆ ಹಾಗೂ ಸೀಮೋಲಂಘನ ಬಳಿಕ ಸಮಾಪನಗೊಂಡಿತು.

ಶ್ರೀಗಳವರ ಚಾತುರ್ಮಾಸ ವ್ರತವು ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಶ್ರೀ ವೆಂಕಟರಮಣ ದೇವಳದಲ್ಲಿ ವಿಜೃಂಭಣೆಯಿಂದ ನಡೆದಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಚಾತುರ್ಮಾಸ ವ್ರತದ ಕೊನೆಯದಿನವಾದ ಇಂದು ಶ್ರೀಗಳವರು ವ್ರತದ ಸಂದರ್ಭದಲ್ಲಿ ಪೂಜಿಸಲ್ಪಟ್ಟ ಮೃತ್ತಿಕೆಯನ್ನು ಶ್ರೀ ಮಹಾಮಾಯ ತೀರ್ಥದಲ್ಲಿ ಪೂಜೆ ಬಳಿಕ ಶ್ರೀಗಳವರ ಅಮೃತ ಹಸ್ತಗಳಿಂದ ವಿಸರ್ಜನೆ ಮಾಡಲಾಯಿತು ಬಳಿಕ ಶ್ರೀಗಳವರು ಮಹಾಮಾಯ ದೇವಳಕ್ಕೆ ಭೇಟಿಯಿತ್ತು ಸೀಮೋಲಂಘನ ಕಾರ್ಯಕ್ರಮ ಜರಗಿತು ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ವಿವಿಧ ದೇವಳ, ಮಠ ಮಂದಿರಗಳ ಪದಾಧಿಕಾರಿಗಳಿಂದ ಮಾಲಾರ್ಪಣೆ, ಪಾದಪೂಜೆ ಬಳಿಕ ಆಶೀರ್ವಚನ ನೆರವೇರಿತು. ಚಾತುರ್ಮಾಸ ಪ್ರಯುಕ್ತ ಶ್ರೀಗಳವರ ದಿಗ್ವಿಜಯ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಭಜಕರು ಆಗಮಿಸಲಿದ್ದು ಇದೇ ಬರುವ ಅಕ್ಟೋಬರ್ ತಿಂಗಳ 15 ತಾರೀಕಿನಂದು ನಡೆಯಲಿದೆ.

Edited By : Vijay Kumar
Kshetra Samachara

Kshetra Samachara

10/09/2022 08:37 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ