ಕುಂದಾಪುರ: ದೇಶದ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಕಳೆದ ನಾಲ್ಕು ದಿನಗಳಿಂದ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಶತಚಂಡಿಕಾ ಯಾಗ ನಡೆಯಿತು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ದೇವಸ್ಥಾನದ ಅರ್ಚಕ ಕಾಳೀದಾಸ ಭಟ್ಟರ ಮಾರ್ಗದರ್ಶನದಲ್ಲಿ ನಡೆದ ನಾಲ್ಕು ದಿನಗಳ ಶತಚಂಡಿಕಾಯಾಗ ಶುಕ್ರವಾರ ಪೂರ್ಣಾಹುತಿಗೊಂಡಿತು.
ಈ ಸಂದರ್ಭ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ನನ್ನ ಕ್ಷೇತ್ರ ಮಾತ್ರವಲ್ಲ, ದೇಶದ ಕಲ್ಯಾಣಕ್ಕಾಗಿ ಶತಚಂಡಿಕಾಯಾಗ ಮಾಡಲಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಕಮಲಶಿಲೆಯಲ್ಲಿ ಇದೇ ತರಹದ ಶತಚಂಡಿಕಾಯಾಗ ಮಾಡಿದ್ದು, ಇದು ಎರಡನೇ ಶತಚಂಡಿಕಾ ಯಾಗ. ದೇಶ ಸುಭಿಕ್ಷವಾಗಬೇಕು. ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪಗಳಿಂದ ಮುಕ್ತಿ ದೊರಕಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಬೇಕು ಎಂದು ಪ್ರಾರ್ಥಿಸಲಾಗಿದೆ ಎಂದರು.
ಸಂಸದ ಜಗ್ಗೇಶ್, ಶೃಂಗೇರಿ ಶಾಸಕ ರಾಜೇಗೌಡ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಾವಿರಾರು ಜನ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
Kshetra Samachara
26/08/2022 06:33 pm