ಮಂಗಳೂರ: ದ.ಕ. ಜಿಲ್ಲೆಯ ಜನರಲ್ಲಿ ನಡುಕ ಹುಟ್ಟಿಸುವಂತೆ ಸರಣಿ ಮೂರು ಕೊಲೆಗಳು ನಡೆದಿದೆ. ಮಸೀದಿ ಮದ್ರಸಾಗಳು ತೆರೆದ ಕೇಂದ್ರವಾಗಿದೆ. ಯಾರೇ ಆದರೂ ಇಲ್ಲಿ ಬಂದು ನೋಡಬಹುದು. ಇಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಅನ್ಯಾಯ ಅಕ್ರಮ ಕೊಲೆಯನ್ನು ನಮ್ಮವನೇ ಮಾಡಿದ್ರೂ ಬೆಂಬಲಿಸುವುದಿಲ್ಲ. ಅಮಾಯಕರಿಗೆ ಅನ್ಯಾಯ ಆಗಬಾರದು ಎಂದು ಧಾರ್ಮಿಕ ಮುಖಂಡ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹೇಳಿಕೆ ನೀಡಿದ್ರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೂರು ಕೊಲೆ ನಡೆದಿದೆ. ಅದರಲ್ಲಿ ಇಬ್ಬರು ನಮ್ಮ ಧರ್ಮದವರೇ. ಸರ್ಕಾರ ಇವ್ರಿಗೆ ಯಾವ ರೀತಿ ಸಾಂತ್ವನ ನೀಡಿದೆ? ಯಾಕೆ ಇಲ್ಲಿ ತಾರತಮ್ಯ ನೀತಿ ಎಂದು ಕಿಡಿಕಾರಿದ್ದಾರೆ. ಹಾಗೇ ಪರಿಹಾರ ವಿತರಣೆಯಲ್ಲಿ ತಾರತಮ್ಯ ಅನುಸರಿಸಲಾಗಿದೆ. ಜನ ಪ್ರತಿನಿಧಿಗಳು ಜನರನ್ನು ಪ್ರತಿನಿಧಿಸಬೇಕೇ ಹೊರತು ಪಾರ್ಟಿಯನ್ನಲ್ಲ. ಒಬ್ಬರ ಕೊಲೆ ಪ್ರಕರಣ ಎನ್ಐಎಗೆ, ಇನ್ನಿಬ್ಬರ ತನಿಖೆ ಸ್ಥಳೀಯ ಪೊಲೀಸರಿಂದ ನಡೀತಿದೆ. ಇಲ್ಲೂ ತಾರತಮ್ಯ ಆಗಿದೆ ಎಂದು ಕಿಡಿಕಾರಿದ್ದಾರೆ.
Kshetra Samachara
08/08/2022 08:22 pm