ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಇಂದು ಆರೂ ಯಕ್ಷಗಾನ ಮೇಳಗಳ ಪ್ರದರ್ಶನ ಸಂಪನ್ನ, ನಾಳೆ ಸೇವೆಯಾಟ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪ್ರವರ್ತಿತ ಆರೂ ದಶಾವತಾರ ಯಕ್ಷಗಾನ ಮೇಳಗಳ ತಿರುಗಾಟವು ಇಂದು ಸಂಪ್ಪನ್ನಗೊಳ್ಳಲಿದೆ.ನವೆಂಬರ್ ತಿಂಗಳ 29 ರಂದು ಯಕ್ಷಗಾನ ಸೇವೆಯಾಟವು ಆರಂಭಗೊಂಡಿದ್ದು,ಇಂದು ಸಂಪ್ಪನ್ನಗೊಳ್ಳಲಿದೆ.

ನಾಳೆ ಕಟೀಲು ರಥ ಬೀದಿಯಲ್ಲಿ ಆರೂ ಯಕ್ಷಗಾನ ಮೇಳಗಳ ಸೇವೆಯಾಟವು ಏಕಕಾಲದಲ್ಲಿ ನಡೆಯಲಿದೆ.ಆರೂ ಯಕ್ಷಗಾನ ಮೇಳಗಳ ಸೇವೆಯಾಟದೊಂದಿಗೆ ಈ ವರ್ಷದ ಯಕ್ಷಗಾನವು ಮುಕ್ತಾಯವಾಗಲಿದೆ.ಆರೂ ಯಕ್ಷಗಾನ ಮೇಳದ ದೇವರ ಏಕ ಕಾಲದಲ್ಲಿ ಚೌಕಿಪೂಜೆ ನಡೆಯುತ್ತದೆ.ಮಂಗಳದ ಬಳಿಕ ದೇವಸ್ಥಾನದ ಒಳಾಂಗಣ ದಲ್ಲಿ ಆರೂ ಯಕ್ಷಗಾನ ಮೇಳಗಳ 12 ಮಂದಿ ಕಲಾವಿದರು,ಹಿಮ್ಮೇಳ ಸಹಿತ ನಾಟ್ಯ ಸೇವೆಯನ್ನು ಪ್ರದರ್ಶಿಸಿ ನಂತರ ಪ್ರದಕ್ಷಿಣೆ ಗೈದು ಶ್ರೀ ದೇವರ ಎದುರು ಗೆಜ್ಜೆ ಬಿಚ್ಚುವ ಮೂಲಕ ಕಲಾವಿದರ ಮೇಳದ ತಿರುಗಾಟಕ್ಕೆ ತೆರೆ ಕಾಣುತ್ತದೆ.

Edited By : PublicNext Desk
Kshetra Samachara

Kshetra Samachara

24/05/2022 10:11 pm

Cinque Terre

5.52 K

Cinque Terre

0

ಸಂಬಂಧಿತ ಸುದ್ದಿ